Sunday, 15th December 2024

ರಾಘವೇಂದ್ರ ರಾಜ್‌ಕುಮಾರ್‌ ಡಿಸ್ಚಾರ್ಜ್

ಬೆಂಗಳೂರು: ಅನಾರೋಗ್ಯದಿಂದ ಫೆ.16ರಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಡಿಸ್ಚಾರ್ಜ್‌ ಆಗಿದ್ದಾರೆ.

ರಾಘಣ್ಣ ಮಾತನಾಡಿ, ‘ಬೆಳಕು ಸಿನಿಮಾದ ಶೂಟಿಂಗ್​ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿ ಕೊಳ್ತು. ಆಸ್ಪತ್ರೆಗೆ ದಾಖಲಾದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್​ ಆದಾಗಲೂ ಅಡ್ಮಿಟ್​ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್​ ಮಾಡಿ ಸದ್ಯ ಪೇಸ್​ ಮೇಕರ್​ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಕೆಲಸಕ್ಕೆ ವಾಪಾ ಸ್ಸಾಗ್ತೇನೆ’ ಎಂದರು.

ನಾನು ಬಿಡುವಿಲ್ಲದೇ ಕೆಲಸ ಮಾಡಿದ್ರಿಂದ ನನಗೆ ಹೀಗಾಗಿರಬಹುದು ಅಂತೀರಾ. ನಾನು ಕೆಲಸದಲ್ಲಿರದೇ ಬೇರೆ ಎಲ್ಲೋ ಇದ್ದಿದ್ರೆ, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬರೋದಕ್ಕೆ ಆಗ್ತಿರ್ಲಿಲ್ಲ. ಆವತ್ತು ಶೂಟಿಂಗ್​ ನನ್ನನ್ನ ಕಾಪಾಡಿದ್ದು. ನಾನು ನನ್ನ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ತಿದ್ದೀನಿ. ನಾನು ದಾವಣಗೆರೆಗೆ ಪೊಗರು ಆಡಿಯೋ ಲಾಂಚ್​ಗೆ ಹೋಗಿರೋದು, ಬಿಡುವಿಲ್ಲದೇ ಕೆಲಸ ಮಾಡಿರೋದು ಯಾವುದೂ ಇದಕ್ಕೆ ಕಾರಣ ಅಲ್ಲ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.