Sunday, 15th December 2024

10 ಮಂದಿ ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ರಾಘವ್ ಲಾರೆನ್ಸ್

ಚೆನ್ನೈ: ಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ್ ಲಾರೆನ್ಸ್ ತಮಿಳುನಾಡಿನ 10 ಮಂದಿ ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ್ದಾರೆ.

ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್ ಇತ್ತೀಚೆಗಷ್ಟೆ ತಮಿಳುನಾಡಿನ ಕೆಲವು ಆಟೋ ಚಾಲಕಿಯರ ಸಾಲವನ್ನು ತೀರಿಸಿ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಬಡತನದ ಬೇಗೆಯಲ್ಲಿ ಬೆಂದು ಸ್ವ ಪರಿಶ್ರಮದಿಂದ ನೃತ್ಯ ನಿರ್ದೇಶಕ, ನಟ, ನಿರ್ದೇಶಕನಾಗಿ ಬೆಳೆದಿರುವ ರಾಘವ್ ಲಾರೆನ್ಸ್ ತಾವು ದುಡಿದ ಹಣದಲ್ಲಿ ಸಮಾಜ ಸೇವೆ ಮಾಡುತ್ತಾ ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡುವ ಕಾಯಕ ಮಾಡುತ್ತಲೇ ಬರುತ್ತಿದ್ದಾರೆ.

ರಾಘವ್ ಲಾರೆನ್ಸ್ ಕೆಲವು ದಿನಗಳ ಹಿಂದಷ್ಟೆ ರೈತರಿಗೆ ಹತ್ತು ಟ್ರ್ಯಾಕ್ಟರ್​ಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ರಾಘವ್ ಲಾರೆನ್ಸ್ ಕೆಲವು ಆಟೋ ಚಾಲಕಿಯರ ಸಾಲ ಮರುಪಾವತಿ ಮಾಡಿ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಾಘವ್ ಲಾರೆನ್ಸ್ ಹಾಗೂ ಯೂಟ್ಯೂಬರ್ ಬಾಲಾ ಎಂಬುವರು ಸೇರಿ ಈ ಕಾರ್ಯವನ್ನು ಮಾಡಿದ್ದಾರೆ.

ಇಬ್ಬರೂ ಸೇರಿ ಮೊದಲಿಗೆ ಮಹಿಳೆಯೊಬ್ಬರಿಗೆ ಹೊಸ ಆಟೊ ಉಡುಗೊರೆಯಾಗಿ ನೀಡಿದ್ದರು. ಅದೇ ದಿನ ಹಲವು ಆಟೋ ಚಾಲಕಿಯರನ್ನು ಸಹ ರಾಘವ್ ಲಾರೆನ್ಸ್ ಭೇಟಿ ಮಾಡಿದ್ದರು. ಆಗ ಆ ಆಟೋ ಚಾಲಕಿಯರು ತಮ್ಮ ದುಡಿಮೆಯ ಬಹುಪಾಲು ಹಣ ಆಟೋ ಕೊಳ್ಳಲು ತೆಗೆದುಕೊಂಡಿದ್ದ ಸಾಲ ಮರುಪಾವತಿಗೆ ಖರ್ಚಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಇದೀಗ ರಾಘವ್ ಹಾಗೂ ಬಾಲ ಸೇರಿಕೊಂಡು ಆಟೋ ಚಾಲಕಿಯರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಆ ಮೂಲಕ ದುಡಿದ ಹಣ ಅವರ ಬಳಿಯೇ ಉಳಿಯುವಂತೆ ಮಾಡಿದ್ದಾರೆ.