Thursday, 12th December 2024

ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಅ.23ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್ವುಡ್‌ ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ವಿಚಾರಣಧೀನ ಖೈದಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಾಧೀಶರು ಅ.23ಕ್ಕೆ ಮುಂದೂಡಿದರು.

ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್‌ 23ಕ್ಕೆ ವಿಚಾರಣೆ ಮುಂದೂಡಿದೆ. ರಾಗಿಣಿ ಪರ ವಾದ ಮಂಡಿಸಿದ ವಕೀಲ ಮಹಮ್ಮದ್ ತಾಕೀರ್‌ ನಟಿ ರಾಗಿಣಿಗೆ ಜಾಮೀನು ನೀಡುವಂತೆ ಕೋರಿದ್ದರು. ಆದರೆ, ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ‌ ಅರ್ಜಿಯ ವಿಚಾರಣೆಯನ್ನ ಅಕ್ಟೋಬರ್‌ 23ಕ್ಕೆ ಮುಂದೂಡಿದೆ. ಹಾಗಾಗಿ ರಾಗಿಣಿ ಮುಂದಿನ ವಾರದವರೆಗೂ ಪರಪ್ಪನ ಆಗ್ರಹಾರದಲ್ಲಿಯೇ ಇರಬೇಕಾಗಿದೆ.