Friday, 22nd November 2024

ರಾಗಿಣಿಗೆ ಜಾಮೀನು ಸಿಕ್ಕರೂ, ನಾಳೆಯೇ ಬಿಡುಗಡೆ !

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸ್ಯಾಂಡಲ್​ವುಡ್​ನ ನಟಿ ರಾಗಿಣಿ ದ್ವಿವೇದಿಗೆ ಗುರುವಾರ ಜಾಮೀನು ಸಿಕ್ಕಿದ್ದರೂ ಬಿಡುಗಡೆಗಾಗಿ ಶುಕ್ರವಾರ ಸಂಜೆವರೆಗೂ ಕಾಯಬೇಕಾಗಿದೆ.

ಕಳೆದ ವರ್ಷ ಸೆಪ್ಟೆಂಬರ್​ 14ರಿಂದ ಜೈಲಿನಲ್ಲೇ ಇರುವ ರಾಗಿಣಿ, ಜಾಮೀನು ಕೋರಿ ಸುಪ್ರೀಂಕೋರ್ಟ್​ನ ಮೊರೆಹೋಗಿದ್ದರು. ಕೋರ್ಟ್‌ ಗುರುವಾರ ರಾಗಿಣಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂಕೋರ್ಟ್​ನ ಆದೇಶ ಪ್ರತಿ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಇನ್ನೂ ಬಂದಿಲ್ಲ. ಹಾಗಾಗಿ ರಾಗಿಣಿಗೆ ಬಿಡುಗಡೆ ಸಿಕ್ಕಿಲ್ಲ. ನಾಳೆ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟಿನ ಆದೇಶ ಪತ್ರಿಯನ್ನ ರಾಗಿಣಿ ಪರ ವಕೀಲರು ಹಾಜರು ಪಡಿಸಲಿದ್ದಾರೆ. ಸಂಜೆ ಬಳಿಕವೇ ರಾಗಿಣಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗಲಿದೆ.

ನಾಳೆ ಸಂಜೆಯವರೆಗೆ ಕಾಯಬೇಕಾದ ಹಿನ್ನೆಲೆ ಮಂಕಾದ ರಾಗಿಣಿ ಕೊಠಡಿಯಲ್ಲಿ ಸುಮ್ಮನೆ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.