*ರಾಗಿಣಿ ವಿರುದ್ದ ಸೊಮೊಟೋ ಕೇಸ್ ದಾಖಲಾಗಿತ್ತು.
ಬೆಂಗಳೂರು: ಕನ್ನಡದ ನಟಿ ರಾಗಿಣಿ ವಿರುದ್ದ ಡ್ರಗ್ಸ್ ಕುರಿತ ಪ್ರಕರಣದಲ್ಲಿ ತನಿಖೆ ನಡೆಯುತ್ತಿಿರುವ ಈ ಸಂದರ್ಭದಲ್ಲಿ ಆಕೆಯ ವಿಚಾರಣೆ ನಡೆಸಿದರೂ, ಬಂಧಿಸದೆ, ಖಾಕಿಯ ನಡೆ ಅಚ್ಚರಿಯನ್ನುಂಟು ಮಾಡಿದೆ.
ವಿಚಾರಣೆ ಸಾಕು, ಬಿಟ್ಟುಬಿಡಿ. ಯಾವುದೇ ಕಾರಣಕ್ಕೂ ಆಕೆಯನ್ನು ಬಂಧಿಸಬಾರದು ಎಂದು ಪೊಲೀಸ್ ಇಲಾಖೆ ಮೇಲೆ ಬಂಧನಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಒತ್ತಡ ಬಂದಿದೆ. ಹೀಗಾಗಿ, ಶುಕ್ರವಾರದ ದಿನ ಶುಕ್ರದೆಸೆ ಬಂದಂತಾಗಿದೆ.
ರಾಗಿಣಿ ದ್ವಿವೇದಿ ವಿರುದ್ದ ಸೊಮೊಟೋ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದರು.