ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಮmನೆಯ ಸದಸ್ಯರು ಎರಡು ತಂಡಗಳಾಗಿ ವಿಂಗಡನೆ ಆಗಿದ್ದು, ಟಿವಿ ಚಾನೆಲ್ ಟಾಸ್ಕ್ ನೀಡಲಾಗಿದೆ. ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಒಂದು ತಂಡದಲ್ಲಿದ್ದರೆ, ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಮತ್ತೊಂದು ತಂಡದಲ್ಲಿದ್ದಾರೆ.
ಮೊದಲ ದಿನ ಆಗಿದ್ದರಿಂದ ನಿನ್ನೆ ನ್ಯೂಸ್ ರೀಡಿಂಗ್ ಮತ್ತು ಅಡುಗೆ ಮಾಡುವ ಟಾಸ್ಕ್ಗಳನ್ನು ನೀಡಲಾಗಿತ್ತು. ಇಂದು ಟಾಸ್ಕ್ನ ಕಾವು ಏರಿದೆ. ಒಂದು ವಾಹಿನಿಯ ತಂಡ, ಇನ್ನೊಂದು ವಾಹಿನಿಗೆ ಸವಾಲು ನೀಡಬೇಕಿದೆ. ಸವಾಲನ್ನು ಒಪ್ಪಿಕೊಂಡು, ಟಾಸ್ಕ್ ಮುಗಿಸಿದರೆ ತಂಡಕ್ಕೆ ಒಂದು ಪಾಯಿಂಟ್ ಸಿಗುತ್ತದೆ. ಈ ಟಾಸ್ಕ್ ವೇಳೆ ಮಂಜು ಅವರು ರಜತ್‌ಗೆ ತಲೆ ಬೋಳಿಸಿಕೊಳ್ಳುವ ಸವಾಲು ನೀಡಿದ್ದಾರೆ. ಸವಾಲನ್ನು ಒಪ್ಪಿಕೊಂಡ ರಜತ್ ತಲೆ ಬೋಳಿಸಿಕೊಂಡಿದ್ದಾರೆ.
ವೇದಿಕೆ ಮೇಲೆ ಬಂದ ಮಂಜು, ಇಲ್ಲಿ ಟ್ರಿಮ್ಮರ್ ಇದೆ. ರಜತ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲ್ ಹಾಕ್ತೇನೆ ಎಂದಿದ್ದಾರೆ. ಅದಕ್ಕೆ ರಜತ್ ಸ್ವಲ್ಪ ಸಮಯ ಯೋಚಿಸಿ ಓಕೆ ಎಂದು ಹೇಳಿದ್ದಾರೆ. ಬಳಿಕ ಮಂಜು ಬಳಿ ಕೂತು ತಲೆ ಬೋಳಿಸಿಕೊಂಡಿದ್ದಾರೆ. ಮಂಜು ಟ್ರಿಮ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಓರ್ವ ಸ್ಪರ್ಧಿ ತಲೆ ಬೋಳಿಸಿಕೊಂಡಿರುವುದು ಇದೇ ಮೊದಲೇನಲ್ಲ. ಹಿಂದಿನಸೀಸನ್‌ಗಳಲ್ಲಿ ಕಾರ್ತಿಕ್ ಮಹೇಶ್, ತುಕಾಲಿ ಸಂತು, ಸೃಜನ್ ಲೋಕೇಶ್, ಚಂದನ್ ಕುಮಾರ್ ಸಹ ತಲೆ ಬೋಳಿಸಿಕೊಂಡಿದ್ದರು.
ಇನ್ನು ಇದೇ ಸವಾಲು ಟಾಸ್ಕ್ನಲ್ಲಿ ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಇದಕ್ಕೆ ಯೆಸ್ ಎಂದು ಐಶ್ವರ್ಯಾ ಈ ಸವಾಲು ಸ್ವೀಕರಿಸಿದ್ದಾರೆ. ಕಷ್ಟಪಟ್ಟು ಹಾಗಲಕಾಯಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ಗೌತಮಿಗೆ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ನೆಲಕ್ಕೆ ಬಿದ್ದು ಹೊರಳಾಡಿ ಕಣ್ಣೀರು ಇಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಅವರಿಗೆ ನೀರು ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
BBK 11: ಹನುಮಂತನ ಪ್ರಶ್ನೆಗಳಿಗೆ ತಬ್ಬಿಬ್ಬಾದ ಗೌತಮಿ-ಮಂಜು: ಸ್ನೇಹದ ಸಂಬಂಧ ಕಟ್?