Wednesday, 18th December 2024

BBK 11: ಸುದೀಪ್​ ಮಾತಿಗೆ ಡೋಂಟ್​ ಕೇರ್: ಬಿಗ್ ಬಾಸ್​ನಲ್ಲಿ ನಿಲ್ಲದ ರಜತ್ ಆರ್ಭಟ

Rajath and Kichcha Sudeep (2)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಮನೆಯಲ್ಲಿ ಜಗಳ ನಡೆಯದೆ ದಿನ ಮುಗಿಯುವುದಿಲ್ಲ ಎಂಬಂತಾಗಿದೆ. ಪ್ರತಿದಿನ ಗಲಾಟೆ ನಡೆಯುತ್ತಲೇ ಇದೆ. ಅದರಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ ರಜತ್ ಕಿಶನ್ ಆಡುವ ಮಾತುಗಳು ಉಳಿದ ಎಲ್ಲ ಸದಸ್ಯರನ್ನು ಕೆರಳಿಸುತ್ತಿದೆ. ಮಾತಿನ ಮೇಲೆ ನಿಗ ಇರಲಿ ಎಂದು ಕಿಚ್ಚ ಸುದೀಪ್ ಹೇಳಿದರೂ ರಜತ್ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ಗೌತಮಿ ಜಾಧವ್, ಉಗ್ರಂ ಮಂಜು, ತ್ರಿವಿಕ್ರಮ್ ಮೇಲೆ ಮಾತಿನ ಸಮರ ಸಾರಿದ್ದಾರೆ.

ಸೋಮವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯನ್ನೂ ಸಂಪೂರ್ಣವಾಗಿ ಕ್ಲೀನ್ ಮಾಡುವ ಟಾಸ್ಕ್ ಕೊಟ್ಟಿದ್ದರು. ಇದರ ಮಧ್ಯೆ ಗೌತಮಿ ಜಾಧವ್ ಹಾಗೂ ರಜತ್ ಕಿಶನ್ ನಡುವೆ ಮಾತಿನ ಯುದ್ಧ ನಡೆಯಿತು. ಸ್ಪರ್ಧಿಗಳೆಲ್ಲ ಮನೆ ಕ್ಲೀನ್ ಮಾಡುತ್ತಿದ್ದರೆ ರಜತ್ ​ಒಂದು ಬದಿ ಆರಾಮವಾಗಿ ಕುಳಿತುಕೊಂಡಿದ್ದರು. ಗೌತಮಿ ಅವರು ಇದರಿಂದ ಕೋಪಿಸಿಕೊಂಡ, ಡೈಲಾಗ್ ಹೊಡಿ, ಕೂತ್ಕೊ.. ಒಂದಷ್ಟು ಹಣ್ಣು ತಿನ್ನು ಎಂದಿದ್ದಾರೆ.

ಗೌತಮಿಯ ಈ ಮಾತಿಗೆ ಟ್ರಿಗರ್ ಆದ ರಜತ್, ಇದು ನಿನ್ನ ಮನೆ ಅಂದ್ಕೊಂಡಿದ್ಯಾ?, ಡ್ರಾಮಾ ಮಾಡ್ಕೊಂಡೇ 12 ವಾರ ಬಂದುಬಿಟ್ಟೆ. ಒಂದ್​ ಬಕೆಟ್​​ ಇನ್ನೊಂದ್​ ಬಕೆಟ್​​​ ಇಡ್ಕೊಂಡಿರೋದನ್ನು ಫಸ್ಟ್​ ಟೈಮ್​​ ನೋಡಿದ್ದು, ನೀನ್​ ದಬಾಕಿರೋದನ್ನು 12 ವಾರಗಳಿಂದ ನೋಡಿದ್ದೀನಿ, ಸಪೋರ್ಟ್​ ಬೇಕು ಅಂತಾ ಯಾರದ್ದೋ ಕಾಲ್ ಹಿಡಿದುಕೊಂಡು ಹೋಗೋದಲ್ಲ, ತಾಕತ್ತಿದ್ರೆ ಇಂಡ್ಯುವಿಶುವಲ್ ಆಗಿ ಅಡು ಎಂದು ಏಕವಚನದಲ್ಲೇ ಮಾತನಾಡಿದ್ದರು.

ಇದಾದ ಬಳಿಕ ಮಂಗಳವಾರ ತ್ರಿವಿಕ್ರಮ್ ನಾಮಿನೇಟ್ ಮಾಡಿದ್ದಕ್ಕೆ, ನಾನೇ ಹೀರೋ, ನಾನೇ ಕರಾಬು, ನಾಮಿನೇಟ್‌ ಮಾಡಿ ಬಿಟ್ರೆ ಚೇಂಜ್‌ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಕೂಗಾಡಿದ್ದಾರೆ. ಇಂಡಿವಿಶುವಲ್.. ಆಡಿ.. ನಿಮ್ಗೆ ತಾಖತ್ತು ಇಲ್ವಾ? ನಾನಿಲ್ಲ ಸುಪಿರಿಯರೇ, ನಾನು ಕರಾಬೇ, ನಾನು ಮಸ್ತೇ, ಹೌದು ನಾಮಿನೇಷನ್​ ಮಾಡಿದ್ರೆ ಚೇಂಜ್ ಆಗಿಬಿಡ್ತೀನಾ? ನಾಳೆಯಿಂದ ನಾನು ಬೇರೆಯವ್ರ ಹೀರೋ ಅಂತೀನಾ? ನಾನೇ ಹೀರೋ.. ಎಂದು ಕಿರುಚಾಡಿದರು. ಬಳಿಕ ಉಗ್ರಂ ಮಂಜು ವಿರುದ್ಧವೂ ಹೊಡೆದಾಡುವ ಮಟ್ಟಕ್ಕೆ ತಲುಪಿದರು.

ಕಳೆದ ವಾರ ಕೂಡ ಧನರಾಜ್-ರಜತ್ ಮಧ್ಯೆ ದೊಡ್ಡ ಫೈಟ್ ನಡೆದಿತ್ತು. ಕಳಪೆ ನೀಡಿದ ಸಂದರ್ಭ, ನೀನೇನು ಮಗು ಮುಟ್ಟಿದ ಹಾಗೆ ಮುಟ್ಟಿರೋದಾ?, ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್​ ಬಾಸ್​ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮಕ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎಂದಿದ್ದರು. ರಜತ್ ಅವರ ಈ ಮಾತು ಧನುಗೆ ಸಿಟ್ಟು ತರಿಸಿ ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎಂದಿದ್ದಾರೆ. ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗಿದ್ದಾರೆ. ಬಳಿಕ ಧನು ಮೇಲೆ ಕೈಮಾಡಲು ಹೋಗಿದ್ದರು.

BBK 11: ಸಾಲ ಮಾಡಿಕೊಂಡಿದ್ದ ಗೋಲ್ಡ್ ಸುರೇಶ್?: ಬಿಗ್ ಬಾಸ್​ನಿಂದ ಹೊರಹೋಗಲು ಇದೇ ಕಾರಣ