ಬಿಗ್ ಬಾಸ್ ಮನೆಯಿಂದ (Bigg Boss Kannada 11) ಚೈತ್ರಾ ಕುಂದಾಪುರ ಸೌಂಡ್ ಜೋರಾಗಿ ಕೇಳಿಬರುತ್ತಿದೆ. ಈ ವಾರ ಅದು ಕೊಂಚ ಹೆಚ್ಚಾಗಿಯೇ ಇದೆ. ಟಾಸ್ಕ್ನಲ್ಲಿ ಉಸ್ತುವಾರಿ ಜವಾಬ್ದಾರಿಯನ್ನೇ ಹೆಚ್ಚಾಗಿ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಸಾಕಷ್ಟು ಗಲಾಟೆ ಕೂಡ ನಡೆದಿದೆ. ಚೈತ್ರಾ ಅವರ ಶಿಸ್ತಿನ ಉಸ್ತುವಾರಿ ಎದುರಾಳಿ ತಂಡದ ಉಸಿರುಗಟ್ಟಿಸುತ್ತಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಸ್ಪರ್ಧಿಗಳು ಚೈತ್ರಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸದ್ಯ ದೊಡ್ಮನೆ ಎರಡು ಗುಂಪುಗಳಾಗಿ ವಿಂಗಡನೆಗೊಂಡಿದೆ. ಒಂದು ಗುಂಪಿಗೆ ತ್ರಿವಿಕ್ರಮ್ ನಾಯಕನಾದರೆ ಮತ್ತೊಂದು ಗ್ರೂಪ್ಗೆ ರಜತ್ ಕಿಶನ್ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ನಾಯಕನಾಗಿರುವ ಗ್ರೂಪ್ನಲ್ಲಿ ಭವ್ಯಾ, ಗೌತಮಿ ಜಾಧವ್, ಮಂಜು ಹಾಗೂ ಚೈತ್ರಾ ಕುಂದಾಪುರ ಇದ್ದರೆ ಅತ್ತ ರಜತ್ ಗುಂಪಿನಲ್ಲಿ ಧನರಾಜ್, ಹನುಮಂತ, ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಈ ಎರಡೂ ಗ್ರೂಪ್ಗಳ ಮಧ್ಯೆ ಕಾಲಕಾಲಕ್ಕೆ ಟಾಸ್ಕ್ ನಡೆಯುತ್ತೆ. ಹೀಗೆ ಟಾಸ್ಕ್ನಲ್ಲಿ ಗೆದ್ದ ತಂಡ ಎದುರಾಳಿ ತಂಡದಲ್ಲಿರುವ ಸದಸ್ಯರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಾರೆ.
ನಿನ್ನೆ ಚೆಂಡು ಸಾಗಲಿ ಮುಂದೆ ಹೋಗಲಿ ಎಂಬ ಟಾಸ್ಕ್ ಮಧ್ಯೆ ಉಸ್ತುವಾರಿ ಚೈತ್ರಾ ಅವರು ಧನರಾಜ್ ಅವರಿಗೆ ಪದೇ ಪದೇ ಪೌಸ್ ಕೊಟ್ಟಿದ್ದಾರೆ. ಟಾಸ್ಕ್ನ ಪ್ರಾಪರ್ಟಿ ಬಳಿ ಬಂದು ಮಾತನಾಡುವಂತಿಲ್ಲ ಎಂದು ಚೈತ್ರಾ ಪದೇ ಪದೇ ಹೇಳಿದರೂ ಕೇಳದ ರಜತ್ ಅದನ್ನೇ ಮಾಡಿದ್ದಾರೆ. ಇನ್ನೊಂದು ಸಲ ಹೀಗೆ ಮಾಡಿದರೆ ಪೌಸ್ ಕೊಡುತ್ತೇನೆ ಎಂದು ಹೇಳಿ ಚೈತ್ರಾ ಪದೇ ಪದೇ ಪೌಸ್ ಕೊಟ್ಟಿದ್ದಾರೆ. ಇದರಿಂದ ಕೆರಳಿದ ರಜತ್, ಧನರಾಜ್ಗೆ ಆಟ ಆಡಲೇ ಬೇಡಿ ಎಂದು ತಡೆದು ಎಲ್ಲ ಚಲ್ಲಾ-ಪಿಲ್ಲಿ ಮಾಡಿದರು. ಒಂದು ಹಂತದಲ್ಲಿ ಚೈತ್ರಾ ಅವರನ್ನು ತಳ್ಳಿ ಬಿಟ್ಟರು.
ಜೊತೆಗೆ ಆಟ ಆಡಿ ಗೆಲ್ಲೋಕೆ ಯೋಗ್ಯತೆ ಇಲ್ಲ ಎಂದು ಚೈತ್ರಾಗೆ ಹೇಳಿದ್ದಾರೆ. ಅತ್ತ ಸುಮ್ಮನಿರದ ಚೈತ್ರಾ, ಹೋಗಲೇ, ತಾಯತ ಕಟ್ಟಿಸುತ್ತೇನೆ ಎಂದವರೆಲ್ಲಾ ತಾಯತ ಕಟ್ಟಿಸಿಕೊಂಡು ಹೋಗುತ್ತಾ ಇದ್ದಾರೆ ಎಂದು ಹೇಳಿದರು. ಟಾಸ್ಕ್ ಮುಗಿದ ಬಳಿಕ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ರಜತ್ಗೆ ಕಿವಿಮಾತು ಹೇಳಿದ್ದಾರೆ. ನೀವು ಚೈತ್ರಾನ ತಳ್ಳಿದ್ದು ತಪ್ಪು. ಕೋಪ ಕಡಿಮೆ ಮಾಡಿಕೊಳ್ಳಬೇಕು. ಚೈತ್ರಾ ಬಳಿ ಕ್ಷಮೆ ಕೇಳಿ ಎಂದಿದ್ದರು.
ತನ್ನ ತಪ್ಪಿನ ಅರಿವಾಗಿ ರಜತ್ ಅವರು ನೇರವಾಗಿ ಚೈತ್ರಾ ಬಳಿ ತೆರಳಿ, ತಪ್ಪಾಯಿತು. ನೀನು ನನ್ನ ತಂಗಿ ಸಮಾನ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ಚೈತ್ರಾ ಅವರು, ಗೇಮ್ ಅಗ್ರೆಶನ್ಅಲ್ಲಿ ಎಲ್ಲರೂ ಮಾಡ್ತಾರೆ. ನನಗೆ ಕಂಫರ್ಟ್ ಇಲ್ಲ ಎಂದರೆ ಅವರ ಬಳಿ ಮಾತನಾಡಲ್ಲ. ನಾನು ನಿಮ್ಮ ಬಳಿ ಹೇಗೆ ನಡೆದುಕೊಳ್ಳುತ್ತಿದ್ದೆ ಎಂಬುದು ನಿಮಗೆ ಗೊತ್ತು. ನೀವು ತಳ್ಳುವಾಗ ಯಾರಿದ್ರೂ ಅದನ್ನು ಮಾಡಬೇಡಿ. ಹುಡುಗಿ ಆಗಿ ತಳ್ಳಿದೆ ಎಂದು ನೀವು ಕ್ಷಮೆ ಕೇಳಬೇಕು ಎಂಬುದಿಲ್ಲ ಎಂದು ಹೇಳಿದರು. ಈ ಮೂಲಕ ಆ ಜಗಳಕ್ಕೆ ಅಲ್ಲೆ ಫುಲ್ಸ್ಟಾಪ್ ಬಿದ್ದಿದೆ.
BBK 11: ‘ನನ್ನ ಕೈಯಲ್ಲಿ ಆಗೋದಿಲ್ಲ’: ಟಾಸ್ಕ್ ಆಡಲಾಗದೆ ಕಣ್ಣೀರಿಟ್ಟ ಚೈತ್ರಾ ಕುಂದಾಪುರ