Monday, 16th September 2024

ಸೂಪರ್ ಸ್ಟಾರ್ ರಜನೀಕಾಂತ್ ಆಸ್ಪತ್ರೆಗೆ ದಾಖಲು

ನವದೆಹಲಿ: ರಕ್ತದೊತ್ತಡದಲ್ಲಿ ಏರಿಳಿತ ಉಂಟಾದ ಕಾರಣದಿಂದ ಸೂಪರ್ ಸ್ಟಾರ್ ರಜನೀಕಾಂತ್ ರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ.

ರಜನೀಕಾಂತ್ ನಟಿಸುತ್ತಿದ್ದ ‘ಅನ್ನಾತೆ’ ಸಿನಿಮಾದ ಚಿತ್ರೀಕರಣದ ಸಂದರ್ಭ ತಂಡದಲ್ಲಿದ್ದ ನಾಲ್ವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ವೇಳೆ ಚಿತ್ರೀಕರಣ ರದ್ದುಗೊಳಿಸಿದ ಬಳಿಕ ರಜನೀಕಾಂತ್ ತಮ್ಮ ಫಾರ್ಮ್ ಹೌಸ್ ನಲ್ಲಿ ಸ್ವಯಂ ಪ್ರತ್ಯೇಕತೆ ಯಲ್ಲಿದ್ದರು. ಹೈದರಾಬಾದ್ ನ ಅಪೋಲೊ ಆಸ್ಪತ್ರೆಯ ಪ್ರಕಾರ ರಜನೀಕಾಂತ್ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ವರದಿ ತಿಳಿಸಿದೆ.

‘ಅವರಲ್ಲಿ ಕೋವಿಡ್ ನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಫಲಿತಾಂಶವೂ ನೆಗೆಟಿವ್ ಬಂದಿದೆ. ಆದರೆ ಅವರ ರಕ್ತ ದೊತ್ತಡದಲ್ಲಿ ಏರಿಳಿತ ಉಂಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಅವರ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸು ತ್ತಿದ್ದೇವೆ’ ಅಪೋಲೋ ಆಸ್ಪತ್ರೆ ತಿಳಿಸಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *