Saturday, 14th December 2024

Baahubali 3 : ಬಾಹುಬಲಿ 3ಕ್ಕೆ ಪ್ರಭಾಸ್‌, ರಾಜಮೌಳಿ ರೆಡಿ! ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ದೇಶಕ

Baahubali 3

ಸೂರ್ಯ ಅಭಿನಯದ ಕೆಂಗುವಾ ಸಿನಿಮಾದ ಖುಷಿಯಲ್ಲಿದ್ದ ಸಿನಿ ಪ್ರೇಕ್ಷಕರಿಗೆ ಡಬಲ್‌ ಖುಷಿ ದೊರಕಲಿದೆ. ಬಾಹುಬಲಿ 3 ರ ನಿರೀಕ್ಷೆಯಲ್ಲಿದ್ದ (Baahubali 3) ಅಭಿಮಾನಿಗಳಿಗೆ ನಿರ್ದೇಶಕ ಕೆ ಇ ಜ್ಞಾನವೇಲ್ ರಾಜಾ ಸಿಹಿ ಸುದ್ದಿ ನೀಡಿದ್ದಾರೆ. ಶಿವಾ ನಿರ್ದೇಶನದ ಹಾಗೂ ಸೂರ್ಯ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಂಗುವಾ ಚಿತ್ರದ ಬಗ್ಗೆ ಮಾತನಾಡುವಾಗ ಬಾಹುಬಲಿಯ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಯೋಜನಾ ಹಂತದಲ್ಲಿರುವ ಸಿನಿಮಾ?

ಈಗಾಗಲೇ ಬಾಹುಬಲಿ 1 ಹಾಗೂ ಬಾಹುಬಲಿ 2 ಸಿನಿಮಾ ಅದ್ಬುತ ಯಶಸನ್ನು ಕಂಡಿದೆ. ಸೌತ್‌ ಸಿನಿಮಾ ಇಂಡಸ್ಟ್ರೀಯನ್ನು ಹಾಲಿವುಡ್‌ನವರೆಗೂ ತಲುಪುವಂತೆ ಮಾಡಿದ್ದು ಇದೇ ಸಿನಿಮಾ. ಇದೀಗ ಬಾಹುಬಲಿ 3 ಕೂಡಾ ಸೆಟ್ಟಿಗೇರಲಿದೆಯಾ? ಎಂದು ಅನುಮಾನ ಶುರುವಾಗಿದೆ. ಯೋಜನಾ ಹಂತದಲ್ಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಲಾರ್‌ ಹಾಗೂ ಕಲ್ಕಿ ನಂತರ ಪ್ರಭಾಸ್‌ರ ಬಹುನಿರೀಕ್ಷಿತ ಚಿತ್ರ ಇದಾಗಿದ್ದು ನಿರ್ಮಾಪಕರ ಬಳಿ ಕಳೆದ ವಾರ ಚರ್ಚಿಸಿದಾಗ ಸಿನಿಮಾದ ಬಗ್ಗೆ ತಿಳಿಯಿತು ಎಂದು ತಮಿಳು ನಿರ್ದೇಶಕ ಕೆ ಇ ಜ್ಞಾನವೇಲ್ ರಾಜಾ ಹೇಳಿದ್ದಾರೆ. ಬಾಹುಬಲಿ ದಿ ಬಿಗಿನಿಂಗ್‌ (Baahubali The Beginning) ಚಿತ್ರದ ತಮಿಳು ಆವೃತ್ತಿಗೆ ಕೆ.ಇ ಜ್ಞಾನವೇಲ್ ರಾಜಾ ವಿತರಕರಾಗಿದ್ದರು. ಬಾಹುಬಲಿ ಬರಹಗಾರ ವಿಜಯೇಂದ್ರ ಹಾಗೂ ನಟ ಪ್ರಭಾಸ್‌ ಹಲವಾರು ಇಂಟರ್‌ವ್ಯೂಗಳಲ್ಲಿ ಬಾಹುಬಲಿ 3ರ ಬಗ್ಗೆ ಮಾತನಾಡಿದ್ದು, ಯಾವುದೇ ರೀತಿಯ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

ರಾಜಮೌಳಿ ಕೂಡಾ ಮೇ ತಿಂಗಳಿನಲ್ಲಿ ನಡೆದ ಬಾಹುಬಲಿ :ಕ್ರೌನ್‌ ಅಫ್‌ ಬ್ಲಡ್‌ ಪ್ರಚಾರ ಕಾರ್ಯಕ್ರಮದಲ್ಲಿ ಬಾಹುಬಲಿ ವಿಶ್ವವನ್ನೇ ಮೀರಿಸುವಂತಹ ಚಿತ್ರವಾಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದರು. ಕೇವಲ ಎರಡೇ ಎರಡು ಭಾಗದಿಂದ ಜನರನ್ನು ತಲುಪಲು ಸಾಧ್ಯವಿಲ್ಲ. ಜನರ ಹಾಗೂ ನಿರ್ಮಾಪಕರ ಮನೋಭಾವನೆ ಬದಲಾಗಬೇಕು ಎಂದು ಬಾಹುಬಲಿ 3ರ ಬಗ್ಗೆ ಸುಳಿವನ್ನು ನೀಡಿದ್ದಾರ? ಎಂಬ ಪ್ರಶ್ನೆ ಕಾಡ ತೊಡಗಿದೆ. ಸದ್ಯ ರಾಜಮೌಳಿ ಮಹೇಶ್‌ ಬಾಬು ನಟನೆಯ ಆಕ್ಷನ್‌ ಸಿನಿಮಾಗೆ ಕಟ್‌ ಹೇಳ್ತಾ ಇದ್ದು, ಮುಂದಿನ ವರ್ಷ ಆ ಸಿನಿಮಾ ಸೆಟ್ಟಿಗೇರಲಿದೆ. ಪ್ರಭಾಸ್‌ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ :OTT Release: ಆಕ್ಷನ್, ಥ್ರಿಲ್ಲರ್ ಸೇರಿದಂತೆ ದೀಪಾವಳಿಯೊಳಗೆ ಒಟಿಟಿಗೆ ಬರಲಿವೆ ಹಲವು ಸಿನಿಮಾ, ವೆಬ್ ಸರಣಿ!