Sunday, 15th December 2024

‘ರಾಮಾಯಣ’ ಧಾರಾವಾಹಿ ಖ್ಯಾತಿಯ ಚಂದ್ರಶೇಖರ್ ನಿಧನ

ಮುಂಬೈ: ನಟ, ‘ರಾಮಾಯಣ’ ಧಾರಾವಾಹಿ ಖ್ಯಾತಿಯ ಚಂದ್ರಶೇಖರ್ (98) ವಯೋಸಹಜ ಮತ್ತು ಅನಾರೋಗ್ಯದಿಂದ ಬುಧವಾರ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಚಂದ್ರಶೇಖರ್ ಅವರ ಪುತ್ರ ನಿರ್ಮಾಪಕ ಅಶೋಕ್ ಶೇಖರ್ ಟ್ವೀಟ್ ಮಾಡಿದ್ದಾರೆ. ಅಂತ್ಯಕ್ರಿಯೆ ಜುಹುವಿನ ಪೊವಾನ್ ಹ್ಯಾನ್ಸ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಚಂದ್ರಶೇಖರ್ ಅವರ ಹುಟ್ಟು ಹೈದರಾಬಾದ್. 1950 ರಲ್ಲಿ ಕಿರಿಯ ಕಲಾವಿದರಾದರು. ನಂತರ ಅವರು ‘ಸುರಂಗ್’ ಚಿತ್ರದ ಮೂಲಕ ನಾಯಕನಾಗಿ ಹೆಸರುವಾಸಿಯಾದರು.

ಕವಿ’, ‘ಮಸ್ತಾನಾ’, ‘ಬಸಂತ್ ಬಹರ್’, ‘ಕಾಳಿ ಟೋಪಿ ಲಾಲ್ ರುಮಾಲ್’, ‘ಗೇಟ್ ಆಫ್ ಇಂಡಿಯಾ’, ‘ಫ್ಯಾಷನ್’, ‘ಧರ್ಮ’, ‘ಡ್ಯಾನ್ಸ್ ಡ್ಯಾನ್ಸ್’, ‘ಲವ್ ಲವ್’ ಚಿತ್ರಗಳಲ್ಲಿ ನಟಿಸಿದ್ದು, ರಾಮನಂದ್ ಸಾಗರ್ ಅವರು ನಿರ್ದೇಶಿಸಿದ ‘ರಾಮಾಯಣ’ ಧಾರಾವಾಹಿಯಲ್ಲಿ ಆರ್ಯ ಸುಮಂತ್ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು.