Sai Pallavi: ರಾಮಾಯಣ ಸಿನಿಮಾ ಬಗ್ಗೆ ನಟಿ ಸಾಯಿ ಪಲ್ಲವಿ ಫಸ್ಟ್ ರಿಯಾಕ್ಷನ್!
ಬಾಲಿವುಡ್ ನಟ ರಣಬೀರ್ ಕಪೂರ್, ಖ್ಯಾತ ನಟಿ ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಇದೀಗ ನಟಿ ಸಾಯಿ ಪಲ್ಲವಿ ಅವರು ರಾಮಾಯಣ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Sai Pallavi

ನವದೆಹಲಿ: ಬಾಲಿವುಡ್ ನಟ ರಣಬೀರ್ ಕಪೂರ್, ಖ್ಯಾತ ನಟಿ ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಿಸಲಾದ ರಾಮಾಯಣ ಸಿನಿಮಾಕ್ಕೆ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮಾಯಣ ಚಿತ್ರದ ಗ್ಲಿಂಪ್ಸ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದು ಭರ್ಜರಿ ಪಾಸಿಟಿವ್ ರೆಸ್ಪಾನ್ಸ್ ಕೂಡ ಪಡೆ ಯುತ್ತಿದೆ. ಈ ಮೂಲಕ ರಾಮಾಯಣದ ಅಷ್ಟು ಅಂಶಗಳನ್ನು ವಿಎಫ್ ಎಕ್ಸ್ ಎಫೆಕ್ಟ್ ಬಳಸಿ ಬಿಡುಗಡೆ ಮಾಡಿರುವ ಗ್ಲಿಂಪ್ಸ್ ನೋಡುಗರ ಗಮನಸೆಳೆಯುತ್ತಿದೆ.
ನಟ ರಣಬೀರ್ ಕಪೂರ್ ಅವರು ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನ ಯಿಸಿದ್ದಾರೆ. ಇದೀಗ ನಟಿ ಸಾಯಿ ಪಲ್ಲವಿ ಅವರು ರಾಮಾಯಣ ಸಿನಿಮಾ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಟೀಸರ್ ಲಿಂಕ್ ಹಂಚಿಕೊಂಡ ಅವರು, ನಿಜವಾಗಿಯೂ ಸೀತೆಯ ಪಾತ್ರ ಸಿಕ್ಕಿದ್ದಕ್ಕೆ ನಾನು ಧನ್ಯ. ಮಹಾ ಕಾವ್ಯವನ್ನು ಪ್ರೇಕ್ಷಕರಿಗೆ ತಲುಪಿಸುವ ಈ ಸಿನಿಮಾದಲ್ಲಿ ನಾನು ಪಾಲ್ಗೊಂಡಿದ್ದೆ ನನ್ನ ಭಾಗ್ಯ ಎಂದು ನಟಿ ಸಾಯಿ ಪಲ್ಲವಿ ಅವರು ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂರು ನಿಮಿಷಗಳ ಈ ಟೀಸರ್ನಲ್ಲಿ ಒಂದು ಬ್ರಹ್ಮಾಂಡದ ಸೃಷ್ಟಿಯನ್ನೇ ಪರಿಚಯಿಸಲಾಗಿದೆ. ತ್ರಿಮೂರ್ತಿಗಳು ಬ್ರಹ್ಮಾಂಡ ಕಾಯುವ ರಕ್ಷಕರು ಎಂದು ತಿಳಿಸಿ ಇಲ್ಲಿ ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಈ ಸೃಷ್ಟಿಯ ಸಂರಕ್ಷಕ, ಶಿವ ಸೃಷ್ಟಿಯ ವಿನಾಶಕ. ತ್ರಿಮೂರ್ತಿಗಳು ಈ ಸೃಷ್ಟಿಯನ್ನು ತಮ್ಮ ಮುಷ್ಠಿ ಯಲ್ಲಿ ಇಟ್ಟುಕೊಳ್ಳಲು ಹೊರಡುತ್ತಾರೆ. ಆಗ ಯುದ್ಧಗಳಿಗೆ ಅಂತ್ಯ ಹಾಡುವ ಮಹಾಯುದ್ಧ ಆರಂಭವಾಯಿತು. ಇದು 2.50 ಶತಕೋಟಿ ಜನರು 5000 ವರ್ಷಗಳಿಂದ ರಾಮ ಮತ್ತು ರಾವ ಣರ ಅಮರ ಕಥೆಯಾಗಿದೆ.ಶಕ್ತಿ ಮತ್ತು ಪ್ರತೀಕಾರ, ಧರ್ಮ ಮತ್ತು ತ್ಯಾಗ ಎಂದು ಗ್ಲಿಂಪ್ಸ್ ನಲ್ಲಿ ತಿಳಿಸಿ ಕೊನೆಗೆ ನಮ್ಮ ಸತ್ಯ ನಮ್ಮ ಇತಿಹಾಸ ಎಂಬ ಮೂಲಕ ಈ ಗ್ಲಿಂಪ್ಸ್ ವಿಡಿಯೋ ಕೊನೆಗೊಳ್ಳುತ್ತದೆ.
ಇದನ್ನು ಓದಿ:S\O Muthanna Movie: ಪ್ರಣಂ ದೇವರಾಜ್ ಈಗ ಮುತ್ತಣ್ಣನ ಮಗ; ʼS\O ಮುತ್ತಣ್ಣʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಸುಮಾರು 800 ಕೋಟಿ ರೂಪಾಯಿ ಬಜೆಟ್ ನ ರಾಮಾಯಣ ಸಿನಿಮಾಕ್ಕೆ ಹಾಲಿವುಡ್ನ ಪ್ರತಿಷ್ಠಿತ ಸ್ಟುಡಿಯೋಗಳು ವಿಎಫ್ಎಕ್ಸ್ ತಂತ್ರಜ್ಞಾನ ಬಳಸಿ ಕೆಲಸ ಮಾಡಿವೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. 2026ರ ದೀಪಾವಳಿಗೆ ಮೊದಲ ಭಾಗ ಬಿಡುಗಡೆ ಆಗಲಿದೆ. 2027ರ ದೀಪಾ ವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದ್ದು ಅಭಿಮಾನಿಗಳ ಕಾತುರ ಇನ್ನಷ್ಟು ಹೆಚ್ಚಿಸಿದೆ.