Sunday, 15th December 2024

59ನೇ ವಸಂತಕ್ಕೆ ಕಾಲಿಟ್ಟ ರಮೇಶ್ ಅರವಿಂದ್

ಬೆಂಗಳೂರು: ಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಸೆ.10ರಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮೇಶ್ ಅವರಿಗೆ ಶಿವಾಜಿ ಸುರತ್ಕಲ್ 2 ಚಿತ್ರತಂಡ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದೆ.

ಶಿವಾಜಿ ಸೂರತ್ಕಲ್ 2 ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ ಯಶಸ್ಸು ಸಾಧಿಸಿದ ನಂತರ ಇದೀಗ ಈ ಚಿತ್ರದ ಸೀಕ್ವೆಲ್ ಆಗಿ ಶಿವಾಜಿ ಸುರತ್ಕಲ್ 2 ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದ ಟ್ಯಾಗ್ ಲೈನ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಎಂದಿದ್ದು, ಕುತೂಹಲ ಹೆಚ್ಚಿಸಿದೆ.

ಚಿತ್ರದ ಟೀಸರ್ ರಮೇಶ್ ಅರವಿಂದ್ ಅವರ ಧ್ವನಿಯಲ್ಲಿರುವ ‘ನಾವು ಬದುಕ್ತಾ ಇರೋದು ನರಕದಲ್ಲಿ, ರಾಕ್ಷಸರು ನಮ್ಮ ಸುತ್ತ ಇದ್ದಾರೆ, ರಾಕ್ಷಸರು ನಮ್ಮ ಜೊತೆಗೂ ಇದ್ದಾರೆ, ರಾಕ್ಷಸರು ನಮ್ಮ ಒಳಗೂ ಇದ್ದಾರೆ’ ಎಂಬ ಡೈಲಾಗ್ ಮೂಲಕ ಆರಂಭಗೊಳ್ಳು ತ್ತದೆ.

ಚಿತ್ರದಲ್ಲಿ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಅಭಿನಯಿಸಿದ್ದರೆ, ಮೇಘನಾ ಗಾಂವ್ಕರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಸರ್ ಕೂಡ ಟೀಸರ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಟೀಸರ್ ಕೊನೆಯಲ್ಲಿ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ ಎಂಬ ಸ್ಪಷ್ಟನೆಯನ್ನೂ ಚಿತ್ರತಂಡ ನೀಡಿದೆ.