Saturday, 14th December 2024

ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ

ಕನ್ನಡ, ತಮಿಳು, ತೆಲುಗು ಹೀಗೆ ದಕ್ಷಿಣ ಭಾರತದ ಸಿನಿಮಾರಂಗ ದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಈಗ, ಬಾಲಿವುಡ್ ಅಂಗಳಕ್ಕೂ ಕಾಲಿರಿಸಿದ್ದಾರೆ.

ಹಾಗಂತ ಸಾನ್ವಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಹಿಂದಿ ಆಲ್ಬಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಪ್ರಸಿದ್ಧ ರ್ಯಾಪರ್ ಬಾದ್ ಷಾ ಅವರ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಹಾಡಿನ ಚಿತ್ರೀಕರಣ ಆರಂಭವಾಗಿದ್ದು, ಚಂಡೀಗಢ ದಲ್ಲಿ ನಡೆದ ಚಿತ್ರೀಕರಣದಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯ ಯಶ್‌ರಾಜ್ ಫಿಲ್ಮ್ಸ್ ಈ ಆಲ್ಬಂ ಸಾಂಗ್ ನಿರ್ಮಾಣ ಮಾಡುತ್ತಿದೆ. ರಶ್ಮಿಕಾ ಹೆಜ್ಜೆ ಹಾಕುತ್ತಿರುವ ಆಲ್ಬಂ ಸಾಂಗ್ ಹೇಗಿರಲಿದೆ ಎಂಬುದನ್ನು ಕಣ್ತುಂಬಿ ಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ರಶ್ಮಿಕಾ ಮಂದಣ್ಣ, ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಏಕೈಕ ಕನ್ನಡದ ನಟಿಯಾಗಿದ್ದಾರೆ.

ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿರುವ ಈ ವರ್ಷ ಟ್ವಿಟರ್‌ನಲ್ಲಿ ಹೆಚ್ಚು ಬಾರಿ ಟ್ವೀಟ್ ಆದ ನಟಿಯಾಗಿ ರಶ್ಮಿಕಾ ಗುರುತಿಸಿ ಕೊಂಡಿದ್ದಾರೆ.