Thursday, 12th December 2024

ರಶ್ಮಿಕಾ ನಟನೆಯ ಮಿಷನ್ ಮಜ್ನು ಚಿತ್ರೀಕರಣ ಆರಂಭ

ಮುಂಬೈ: ಬಾಲಿವುಡ್​ ನಟ ಸಿದ್ಧಾರ್ಥ್​ ಮಲ್ಹೋತ್ರಾ ಅವರ ಮುಂದಿನ ಸಿನಿಮಾ ಮಿಷನ್ ಮಜ್ನು ಚಿತ್ರೀಕರಣ ಲಕ್ನೋದಲ್ಲಿ ಆರಂಭವಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಬಾಲಿವುಡ್​ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಕಾರಣದಿಂದಲೇ ದಕ್ಷಿಣ ಭಾರತದಲ್ಲೂ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

1970ರ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಶಾಶ್ವತವಾಗಿ ಹೇಗೆ ಬದಲಾಯ್ತು ಅನ್ನುವುದನ್ನು ತೋರಿಸುವ ಪ್ರಯತ್ನವನ್ನ ಈ ಸಿನಿಮಾ ಮೂಲಕ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಬಾಲಿವುಡ್​ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.