ಮುಂಬೈ : ಹಿರಿಯ ನಟ ರವಿ ಪಟವರ್ಧನ್(83) ಅವರು ಹೃದಯಾಘಾತದಿಂದ ನಿಧನರಾದರು. ಉಸಿರಾಟದ ತೊಂದರೆಯಿಂದ ನಟನನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವರ್ಷದ ಆರಂಭದಲ್ಲಿ ಮಾರ್ಚ್ ನಲ್ಲಿ ಹಿರಿಯ ನಟ ರವಿ ಪಟವರ್ಧನ್ ಹೃದಯಾಘಾತವಾಗಿತ್ತು. ಇಂತಹ ನಟನಿಗೆ ಮತ್ತೊಮ್ಮೆ ಹೃದಯಾಘಾತವಾಗಿ ಇದೀಗ ನಿಧನರಾಗಿದ್ದಾರೆ.
ನಟ ರವಿ ಪಟವರ್ಧನ್ ಪುತ್ರ ನಿರಂಜನ್ ಮಾಹಿತಿ ನೀಡಿದ್ದು, ಅವರಿಗೆ ಉಸಿರಾಟದ ತೊಂದರೆ ಯಾದ ಹಿನ್ನೆಲೆಯಲ್ಲಿ ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ 9-9.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಮೂರ್ಛೆ ಹೋಗಿದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಗೆ ತೆರಳಿದ ಅರ್ಧ ಗಂಟೆ ಯೊಳಗೆ ನಾವು ಅವರನ್ನು ಕಳೆದುಕೊಂಡೆವು’ ಎಂದು ತಿಳಿಸಿದ್ದಾರೆ.
ಮರಾಠಿ ಟಿವಿ ಶೋ ‘ಅಗಾಬಾಯಿ ಸಸುಬೈ’ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರವಿ ಪಟವರ್ಧನ್ 200ಕ್ಕೂ ಹೆಚ್ಚು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಮರಾಠಿ ಚಿತ್ರ ಆರಣ್ಯಕ್ ನಲ್ಲಿ ಧೃತರಾಷ್ಟ್ರನಾಗಿ ರವಿ ಪಟವರ್ಧನ್ ಪಾತ್ರ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದ ಅಂಕುಶ್, ತೇಸಾಬ್, ಆಶ್ಯ ಆಸಯಾ ಸುನಾ, ಉಂಬರ್ತ, ಜ್ಯೋತಿಬಾ ಫುಲೆ ಮುಂತಾದ ಮರಾಠಿ ಚಿತ್ರಗಳಲ್ಲಿ ನಟಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಟ್ವಿಟರ್ ನಲ್ಲಿ ಹಿರಿಯ ನಟ ರವಿ ಪಟವರ್ಧನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.