Wednesday, 11th December 2024

ವಿಶ್ವದ ದಿ ಬೆಸ್ಟ್ 50 ಡೈರೆಕ್ಟರ್ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ..!

ಬೆಂಗಳೂರು: ವಿಶ್ವದ ದಿ ಬೆಸ್ಟ್ 50 ಡೈರೆಕ್ಟರ್ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರೂ ಕೂಡ ಇದೆ.

IMDb ವಿಶ್ವದ ದಿ ಬೆಸ್ಟ್ ಡೈರೆಕ್ಟರ್‌ಗಳ ಒಂದು ಪಟ್ಟಿ ಹೊರಗೆ ಬಿಟ್ಟಿದೆ. ಅಂತಹ ಈ IMDb ಯನ್ನ Internet Movie Database ಅಂತಲೂ ಕರೆಯುತ್ತಾರೆ.

ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ 8 ನೇ ಸ್ಟಾನದಲ್ಲಿಯೇ ಇದ್ದಾರೆ.

ಬಾಲಿವುಡ್‌ ಡೈರೆಕ್ಟರ್ ರಾಜಕುಮಾರ್ ಹಿರಾನಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಹಾಲಿವುಡ್‌ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಇದ್ದಾರೆ. ಇವರೆಲ್ಲ ಒಂದು ಅತಿ ದೊಡ್ಡ ಪಟ್ಟಿಯಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಇದೆ.

ಉಪೇಂದ್ರ ಅವರು 10 ಸಿನಿಮಾ ಡೈರೆಕ್ಟರ್ ಮಾಡಿದ್ದಾರೆ. ಸರಿಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯಂತ ವಿಭಿನ್ನ ಡೈರೆಕ್ಟರ್ ಅನ್ನೋದನ್ನ ಓಂ, ಶ್, ತರ್ಲೆ ನನ್ಮಗ ಸಿನಿಮಾಗಳ ಹೆಸರು ತೆಗೆದುಕೊಂಡು ಹೇಳಿದ್ದರು.