Monday, 25th November 2024

Rhea Chakraborty: ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ; ರಿಯಾ ಚಕ್ರವರ್ತಿಗೆ ಸುಪ್ರೀಂನಿಂದ ಬಿಗ್‌ ರಿಲೀಫ್‌

Rhea Chakraborty

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ(Rhea Chakraborty)ಗೆ ಸುಪ್ರೀಂ ಕೋರ್ಟ್‌(Supreme Court) ಬಿಗ್‌ ರಿಲೀಫ್‌ ನೀಡಿದೆ. ಪ್ರಕರಣದಿಂದ ರಿಯಾ, ಆಕೆಯ ಸಹೋದರ ಶೋವಿಕ್‌ ಮತ್ತು ಆಕೆಯ ತಂದೆಯನ್ನು ವಿರುದ್ಧದ ಲುಕ್‌ಔಟ್‌ ನೋಟಿಸ್‌ ಅನ್ನು ವಜಾಗೊಳಿಸಿ ಬಾಂಬೆ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ(CBI), ಮಹಾರಾಷ್ಟ್ರ ಸರ್ಕಾರ ಮತ್ತು ಬ್ಯೂರೋ ಆಫ್ ಇಮಿಗ್ರೇಷನ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಇದೀಗ ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅದನ್ನು ತಿರಸ್ಕರಿಸಿದೆ. ಅಲ್ಲದೇ ಮೌಖಿಕವಾಗಿ ಅರ್ಜಿಯನ್ನು ಕ್ಷುಲ್ಲಕ ಮತ್ತು ಆರೋಪಿಗಳು “ಉನ್ನತ ವ್ಯಕ್ತಿ” ಎಂಬ ಕಾರಣಕ್ಕಾಗಿ ಸಲ್ಲಿಸಲಾಗಿದೆ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ

ಜೂನ್ 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ಅವರ ಹಠಾತ್ ನಿಧನದಿಂದ ಎಲ್ಲರಿಗೂ ಆಘಾತ ಉಂಟಾಗಿತ್ತು. ತನಿಖೆ ವೇಳೆ ಸುಶಾಂತ್ ಸಿಂಗ್ ಅವರದ್ದು ‘ಆತ್ಮಹತ್ಯೆ’ ಎಂದು ಹೇಳಲಾಯಿತು. ಆದರೆ, ಸುಶಾಂತ್ ಸಿಂಗ್‌ ಕುಟುಂಬಸ್ಥರಿಗೆ ಬೇರೆಯದ್ದೇ ಅನುಮಾನವಿದೆ.

ಸೋಷಿಯಲ್ ಮೀಡಿಯಾದಲ್ಲಿ ಅನೇಕ ತಿಂಗಳುಗಳ ಕಾಲ #JusticeForSSR ಟ್ರೆಂಡ್ ಆಯ್ತು. ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಸಿಬಿಐ ತನಿಖೆ ನಡೆಸುತ್ತಿದೆ. ಡ್ರಗ್ಸ್ ಕೇಸ್‌ನಲ್ಲಿ ಸುಶಾಂತ್ ಸಿಂಗ್ ಅವರ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು.

ಇತ್ತೀಚೆಗೆ ನಟಿ ರಿಯಾ ಚಕ್ರವರ್ತಿ ಅವರು ಉದ್ಯಮಿ ನಿಖಿಲ್ ಕಾಮತ್ ಜೊತೆ ಬೈಕ್ ರೈಡ್ ಹೋಗಿದ್ದರು. ಅದು ಕ್ಯಾಮರಾದಲ್ಲಿ ಸೆರೆ ಆಗಿತ್ತು. ಈಗ ಇವರು ಯುಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಮದುವೆ ಲೈಫ್ ಬಗ್ಗೆ ಮಾತನಾಡಿದ್ದರು.

ನಿಖಿಲ್ ಕಾಮತ್ ಜೊತೆಗೆ ರಿಯಾ ಚಕ್ರವರ್ತಿ ಲವ್ ಮಾಡುತ್ತಿರುವ ಬಗ್ಗೆ ಅವರಿಬ್ಬರು ಪ್ರತಿಕ್ರಿಯೆ ಕೊಟ್ಟಿಲ್ಲ. ಅಂದಹಾಗೆ ನಿಖಿಲ್ ಕಾಮತ್ ಅವರು ಇನ್ನೂ ಮದುವೆಯಾಗಿಲ್ಲ. ಮಕ್ಕಳ ಬಗ್ಗೆ ಮಾತನಾಡಿದ್ದ ಅವರು ವಯಸ್ಸಾದ ಮೇಲೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತವೆ ಎನ್ನುವ ಆಶಯದೊಂದಿಗೆ ಮಕ್ಕಳನ್ನು ಬೆಳೆಸಲು ಇಷ್ಟ ಇಲ್ಲ. ಒಂದು ಮಗು ಬೆಳೆಸಲು 20 ವರ್ಷ ಬೇಕು. ಆ ಮಗು ನಮ್ಮನ್ನು ಬಿಟ್ಟು ಹೋದರೆ ಏನು ಮಾಡೋದು? ಹೀಗಾಗಿ ಈ ವಿಚಾರದಲ್ಲಿ ಸಮಯ ಹಾಳು ಮಾಡಲು ಇಷ್ಟವಿಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: BBK 11 TRP: ಬಿಗ್ ಬಾಸ್​ಗೆ ಬಿಗ್ ಶಾಕ್: ಟಿಆರ್​ಪಿಯಲ್ಲಿ ಕುಸಿದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ