Thursday, 12th December 2024

ಹೊಸ ದಾಖಲೆ ಬರೆದ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡು

ಚೆನ್ನೈ: ಧನುಷ್​ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್​ ಹಿಟ್​ ಆಗಿರುವುದಲ್ಲದೆ, ಹೊಸ ದಾಖಲೆ ಬರೆದಿದೆ.

ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್​ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಡನ್ನು ಧನುಷ್​ ಮತ್ತು ಧೀ ಹಾಡಿದ್ದಾರೆ. ಈ ಖುಷಿ ವಿಚಾರ ವನ್ನು ಚಿತ್ರತಂಡ ಸಂಭ್ರಮಿಸಿದ್ದು, ಧನುಷ್​ ಅವರ ವಿಶೇಷ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ.

ಧನುಷ್​ ಅವರ ಹೊಸ ಸಿಡಿಪಿ ಅವರ ಅಭಿಮಾನಿಗಳಿಗೆ ಸಂತಸ ನೀಡಿದರೆ, ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಅಸಮಾ ಧಾನಗೊಂಡಿದ್ದಾರೆ.

ಪೋಸ್ಟರ್​ನಲ್ಲಿ ಅವರ ಫೋಟೋ ಇಲ್ಲದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಹಾಡು ಅಷ್ಟೊಂದು ಯಶಸ್ಸು ಸಾಧಿಸುವುದರ ಹಿಂದೆ ಸಾಯಿ ಪಲ್ಲವಿ ಶ್ರಮವು ಇದೆ. ಅವರ ನೃತ್ಯದಿಂದಲೇ ಹಾಡು ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಪೋಸ್ಟರ್​ನಲ್ಲಿ ಸಾಯಿ ಪಲ್ಲವಿ ಫೋಟೋ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

2015ರಲ್ಲಿ ತೆರೆಕಂಡ ಮಾರಿ ಚಿತ್ರ ಯಶಸ್ಸು ಗಳಿಸಿದ ಬಳಿ ಅದರ ಮುಂದುವರಿದ ಸರಣಿ ಮಾರಿ 2 ಅನ್ನು ಬಾಲಾಜಿ ಮೋಹನ್​ ನಿರ್ದೇಶಿಸಿದರು. ಚಿತ್ರವನ್ನು ಧನುಷ್​ ತಮ್ಮ ಬ್ಯಾನರ್​ ವಂಡರ್​ಬಾರ್​ ಫಿಲ್ಮ್ಸ್​ ಅಡಿಯಲ್ಲಿ ನಿರ್ಮಾಣ ಮಾಡಿದರು.

Actor Navdeep, Co Founder C Space Along With Rakesh Rudravanka – CEO – C Space