ಗುಂಟೂರ್: ಗಾಯಕಿ ಎಸ್. ಜಾನಕಿ ಶುಕ್ರವಾರ ತಮ್ಮ 83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
25 ಭಾಷೆಗಳಲ್ಲಿ ಹಾಡಿರುವ ಇವರು ಸುಮಾರು 48000 ಹಾಡುಗಳಿಗೆ ಧ್ವನಿಯಾಗಿದ್ದಾರೆ. 1957ರಂದು ‘ವಿಧಿಯಿನ್ ವಿಳಯಾಟ್ಟು’ ಎಂಬ ಚಿತ್ರದಲ್ಲಿ ಹಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಎಸ್. ಜಾನಕಿ ಅವರು ಮೈಸೂರು ವಿಶ್ವವಿದ್ಯಾ ಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ಎಸ್. ಜಾನಕಿ 1938 ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಎಂಬ ಊರಿನಲ್ಲಿ ಜನಿಸಿದರು. ಹಲವು ಭಾಷೆಯ ಚಿತ್ರರಂಗದ ಕಲಾವಿದರು ಇಂದು ಎಸ್. ಜಾನಕಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.