Friday, 22nd November 2024

ಕಾಶ್ಮೀರ ನರಮೇಧ ಕುರಿತ ನಟಿ ಸಾಯಿ ಪಲ್ಲವಿ ಹೇಳಿಕೆ: ಮಿಶ್ರ ಪ್ರತಿಕ್ರಿಯೆ..

ನವದೆಹಲಿ: ತೆಲುಗು, ತಮಿಳು, ಮಲಯಾಳಂನ ನಟಿ ಸಾಯಿ ಪಲ್ಲವಿ ತಮ್ಮ ಮುಂಬರುವ ಚಲನಚಿತ್ರ `ವಿರಾಟ ಪರ್ವಮ್’ ಪ್ರಮೋಷನ್ ವೇಳೆ ಕಾಶ್ಮೀರ ದಲ್ಲಿ ನಡೆದ ನರಮೇಧವನ್ನು `ಗೋ ಸಾಗಾಟಕ್ಕಾಗಿ’ ನಡೆಯುವ ಹತ್ಯೆಗಳಿಗೆ ಹೋಲಿಸಿದ್ದಾರೆ.

ಆಕೆಯ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಹೇಳಿಕೆ ಗಳು ವ್ಯಕ್ತವಾಗಿವೆ. ಕೆಲವರು ನಟಿಯ ಮಾತುಗಳನ್ನು ಪ್ರಶಂಸಿಸಿದರೆ ಕೆಲವರು ಒಪ್ಪಿಲ್ಲ.

ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ “ನಾನು ತಟಸ್ಥ ವಾತಾವರಣದಲ್ಲಿ ಬೆಳೆದವಳು. ಎಡಪಂಥ ಹಾಗೂ ಬಲಪಂಥದ ಬಗ್ಗೆ ನಾನು ಕೇಳಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆಗೈಯ್ಯಲಾಯಿತು ಎಂದು ಹೇಳುತ್ತದೆ.

ಇತ್ತೀಚೆಗೆ ದನವನ್ನು ಸಾಗಿಸುತ್ತಿದ್ದಾನೆ ಎಂದು ಒಬ್ಬ ವ್ಯಕ್ತಿಯನ್ನು ಹತ್ಯೆಗೈಯ್ಯ ಲಾಯಿತು ಆತ ಮುಸ್ಲಿಮನೆಂಬ ಶಂಕೆಯಿಂದ ಹತ್ಯೆ ನಡೆಯಿತು. ನಂತರ ದಾಳಿಕೋರರು ಜೈ ಶ್ರೀ ರಾಮ್ ಘೋಷಣೆ ಕೂಗಿದರು. ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಇತ್ತೀಚೆಗೆ ನಡೆದಿರುವುದಕ್ಕೂ ವ್ಯತ್ಯಾಸವೇನಿದೆ?” ಎಂದು ಆಕೆ ಪ್ರಶ್ನಿಸಿದರು. ಒಳ್ಳೆಯ ಮನುಷ್ಯಳಾಗಬೇಕೆಂದು ನಮಗೆ ಕುಟುಂಬ ದಲ್ಲಿ ಕಲಿಸಲಾಗಿದೆ. ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಬೇಕು. ಅವರ ಸ್ಥಾನಮಾನ ಮುಖ್ಯವಲ್ಲ ಎಂದಿದ್ದಾರೆ.

ಹಲವಾರು ಬಲಪಂಥೀಯರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂಸೆ ಹೇಗಿದ್ದರೂ ಹಿಂಸೆಯೇ, ಯಾರು ಅದನ್ನು ಯಾವುದೇ ವಿಧದಲ್ಲಿ ನಡೆಸಿ ದರೂ ಅದು ಹಿಂಸೆಯೇ. ನಮಗೆ ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರುವ ಇಂತಹ ನಟಿಯ ಅವಶ್ಯಕತೆಯಿದೆ” ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.