Monday, 16th September 2024

ಸಲ್ಮಾನ್’ಗೆ ಹಾವು ಕಡಿತ: ಕಾಮೋಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್

Salman Khan

ಮುಂಬೈ: ಸಲ್ಮಾನ್ ಖಾನ್ ಅವರಿಗೆ ಭಾನುವಾರ ಬೆಳಿಗ್ಗೆ ಪನ್ವೇಲ್ ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆ. ಮುಂಬೈನ ಕಾಮೋಥೆ ಆಸ್ಪತ್ರೆಗೆ ಸಾಗಿಸಲಾಯಿತು. ವಿಷವಿಲ್ಲದ ಹಾವು ಕಚ್ಚಿದೆ ಎಂದು ವರದಿಯಾಗಿದೆ.

ಚಿಕಿತ್ಸೆ ಪಡೆದ ನಂತರ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಬಾಂಗ್ ನಟ ಈಗ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಡಿ.27ಕ್ಕೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಪ್ರಸ್ತುತ ಫಾರ್ಮ್‌ಹೌಸ್‌ನಲ್ಲಿದ್ದಾರೆ. ವಾಯು ವಿಹಾರದ ಹೊರಗಿನ ಉದ್ಯಾನ ಪ್ರದೇಶದಲ್ಲಿ ಹಾವು ಕಚ್ಚಿದೆ ಎನ್ನಲಾಗಿದೆ.

ಘಟನೆ ನಡೆದಾಗ ಸಲ್ಮಾನ್ ಕೆಲವು ಸ್ನೇಹಿತರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಶನಿವಾರ ರಾತ್ರಿ ಅವರು ಕುಳಿತುಕೊಂಡು ತನ್ನ ಸ್ನೇಹಿತ ರೊಂದಿಗೆ ಮಾತನಾಡುತ್ತಿದ್ದಾಗ ಇದು ಸಂಭವಿಸಿದೆ.