Thursday, 12th December 2024

ದಬಂಗ್‌ ಖ್ಯಾತಿಯ ಸಲ್ಮಾನ್‌ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ 55 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ತಮ್ಮ ಜನ್ಮದಿನವನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಆಚರಿಸಿ ದ್ದಾರೆ. ಈ ಬಾರಿ ಕೊರೋನಾ ಕಾರಣದಿಂದ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಬರ್ತಡೇ ದಿನ ಮನೆಯ ಬಳಿ ಬರೆದಂತೆ ಮೊದಲೇ ಅಭಿಮಾನಿಗಳಿಗೆ ಅವರು ಮನವಿ ಮಾಡಿದ್ದರು. ಕೊರೋನಾ ಕಾರಣದಿಂದ ಮನೆಯ ಬಳಿ ಬರದಂತೆ ಮನವಿ ಮಾಡಿದ ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಾರೆ. ಅಭಿಮಾನಿಗಳನ್ನು ಭೇಟಿಯಾಗಲು ಹೊರಗೆ ಬಂದ ಸಲ್ಮಾನ್ ಕೈಬೀಸಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.