ಮುಂಬೈ : ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಬಾಬಾ ಸಿದ್ಧಿಕಿಯನ್ನು( Baba Siddique) ಇತ್ತೀಚೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ( Lawrence Bishnoi ) ಶೂಟರ್‌ಗಳು ಅಕ್ಟೋಬರ್ 12ರಂದು, ಅವರನ್ನು ಪುತ್ರ ಶಾಸಕ ಜಿಶಾನ್ ಸಿದ್ದಿಕಿ ಕಚೇರಿಯ ಎದುರೇ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಸಲ್ಮಾನ್ ಖಾನ್ ಹಾಗೂ ಬಾಬಾ ಸಿದ್ದಿಕಿ ಆತ್ಮೀಯ ಮಿತ್ರರಾಗಿದ್ದು ಸಿದ್ಧಿಕ್ ಸಾವು ಸಲ್ಮಾನ್ ಖಾನ್‌ಗೆ (Salman Khan) ಬಹಳ ನೋವು ಉಂಟು ಮಾಡಿದೆ ಎಂದು ಬಾಬಾ ಸಿದ್ದಿಕಿ ಮಗ ಜಿಶಾನ್ ಸಿದ್ದಕಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಘಟನೆಯ ನಂತರ ಸಲ್ಮಾನ್ ಭಾಯ್ ತುಂಬಾ ಬೇಸರಗೊಂಡಿದ್ದಾರೆ. ನನ್ನ ತಂದೆ ಮತ್ತು ಸಲ್ಮಾನ್ ಭಾಯ್ ನಿಜವಾದ ಸಹೋದರರಂತೆ ತುಂಬಾ ಆತ್ಮೀಯರಾಗಿದ್ದರು. ತಂದೆಯ ಮರಣದ ನಂತರ, ಭಾಯ್ ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಅವರು ಯಾವಾಗಲೂ ನನಗೆ ಕರೆ ಮಾಡುತ್ತಾರೆ ಮತ್ತು ರಾತ್ರಿಯಲ್ಲಿ ಅವರು ನನ್ನೊಂದಿಗೆ ಮಾತನಾಡುತ್ತಾರೆ. ಅವರ ಬೆಂಬಲ ಯಾವಾಗಲೂ ಇರುತ್ತದೆ ಮತ್ತು ಅದೇ ರೀತಿ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ಸಿದ್ದಿಕ್ ಹತ್ಯೆಯ ನಂತರ ಸಲ್ಮಾನ್ ಖಾನ್‌ಗೆ ಬೆದರಿಕೆ ಬಂದಿದ್ದು, ಬಿಷ್ಣೋಯ್ ಸಮಾಜದವರಿಗೆ ಸಲ್ಮಾನ್ ಕ್ಷಮೆ ಕೇಳಬೇಕು ಇಲ್ಲವಾದರೆ 5 ಕೋಟಿ ರೂಪಾಯಿ ನೀಡಬೇಕು ಎಂದು ಬೆದರಿಕೆ ಹಾಕಿದ್ದರು. ಸಿದ್ದಿಕಿ ಹತ್ಯೆಯ ಬಳಿಕ ಸಲ್ಮಾನ್ ಗೆ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಶಾನ್ ಹೇಳಿದ್ದಾರೆ.
ಇದನ್ನೂ ಓದಿ : Rakesh Tikait: ಬಿಷ್ಣೋಯ್ ಗ್ಯಾಂಗ್ ಬೆದರಿಕೆ ನಡುವೆಯೇ ಸಲ್ಮಾನ್ ಖಾನ್‌ಗೆ ರಾಕೇಶ್ ಟಿಕಾಯತ್‌ನಿಂದ ಮಹತ್ವದ ಸಲಹೆ
1998 ರಲ್ಲಿ ಸಲ್ಮಾನ್ ಬಿಷ್ಣೋಯಿ ಸಮಾಜ ದೇವರೆಂದು ಪೂಜಿಸುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ನಂತರ ರಾಜಸ್ಥಾನ ಹೈ ಕೋರ್ಟ್ ಸಲ್ಮಾನ್ ಖಾನ್ ಅಪರಾಧಿ ಎಂದು ಘೋಷಿಸಿ ಶಿಕ್ಷೆಯನ್ನು ಪ್ರಕಟ ಮಾಡಿತ್ತು. ಹೈ ಕೋರ್ಟ್ ನಿರ್ಧಾರ ಪ್ರಶ್ನಿಸಿ ನಟ ಸುಪ್ರೀಂ ಮೊರೆ ಹೋಗಿದ್ದರು. ಈ ಘಟನೆಯ ನಂತರ ಲಾರೆನ್ಸ್ ಬಿಷ್ಣೋಯ್ ಮಾತ್ತು ಗ್ಯಾಂಗ್ ಸಲ್ಮಾನ್ ಖಾನ್ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದೆ.
ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಅವರ ನಿವಾಸದ ಸುತ್ತ ಹೈ ಸೆಕ್ಯುರಿಟಿ ನೀಡಿದ್ದು ಕಮಾಂಡೋ ಸೆಂಟರ್ ತೆರೆಯಲಾಗಿದೆ. ಮುಂಬೈ ಪೊಲೀಸರು ಬೆಂಗಾವಲು ಪಡೆಯನ್ನು ನೀಡಿದ್ದಾರೆ. ಸಿದ್ದಿಕಿ ಹತ್ಯೆ ಮಾಡಿದ ಎರಡು ಶೂಟರ್‌ಗಳನ್ನು ಸೇರಿ ಒಟ್ಟು 10 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದರ ಮಧ್ಯೆ ಬಂಧಿತ ವ್ಯಕ್ತಿಗಳು ಲಾರೆನ್ಸ್ ಸಹೋದರ ಅನ್ಮೋಲ್ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.