Sunday, 15th December 2024

Salman khan : 60 ಬಾಡಿಗಾರ್ಡ್‌ಗಳ ಜತೆ ಬಿಗ್‌ ಬಾಸ್‌ ಶೂಟಿಂಗ್‌ಗೆ ತೆರಳಿದ ಸಲ್ಮಾನ್ ಖಾನ್‌!

Salman Khan

ಬಾಲಿವುಡ್‌ ನ ಸ್ಟಾರ್‌ ನಟ ಸಲ್ಮಾನ್‌ ಖಾನ್‌ಗೆ (Salman Khan) ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಜೀವ ಬೆದರಿಕೆ ಒಡ್ಡಿರುವ ಕಾರಣ ತಮ್ಮ ಬಾಡಿಗಾರ್ಡ್ಸ್‌ಗಳ ಸಂಖ್ಯೆಯನ್ನು ಅವರು ಹೆಚ್ಚಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಬಿಗ್‌ಬಾಸ್‌ನ ಶೂಟಿಂಗ್‌ಗೆ ತೆರಳುವ ವೇಳೆ ಅವರು 60 ಬಾಡಿಗಾರ್ಡ್ಸ್‌ ರಕ್ಷಣೆಯಲ್ಲಿ ತೆರಳಿದ್ದಾರೆ. ಇತ್ತೀಚಿಗೆ ನಡೆದ ಎನ್‌ಸಿಪಿ (ಅಜಿತ್ ಪವಾರ್‌ ಬಣ) ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಬಾಲಿವುಡ್‌ ಅಂಗಳವನ್ನು ಬೆಚ್ಚಿ ಬೀಳಿಸಿತ್ತು. ಸಲ್ಮಾನ್ ಖಾನ್‌ ಜತೆ ಆತ್ಮೀಯರಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಬಿಷ್ಣೋಯಿ ಗ್ಯಾಂಗ್‌ನ ಕೊಲೆಗಡುಕರು ಹತ್ಯೆ ಮಾಡಿದ್ದರು.

ಇದೀಗ ಸಲ್ಮಾನ್‌ ಖಾನ್‌ಗೂ ಭಯ ಹುಟ್ಟಿದ್ದು, ಬಿಗ್‌ ಬಾಸ್‌ 18 ರ ಆವೃತ್ತಿಯ ಶೂಟಿಂಗ್‌ಗೆ 60 ಬಾಡಿಗಾರ್ಡ್ಸ್‌ ಸಮೇತ ಸಲ್ಮಾನ್‌ ಖಾನ್‌ ಎಂಟ್ರಿ ಕೊಟ್ಟಿದ್ದಾರೆ. ಗುರುವಾರ ತಡ ರಾತ್ರಿ ಬಿಗ್‌ ಬಾಸ್‌ ಮನೆಗೆ ಬಂದ ಅವರಿಗೆ ಖಾಸಗಿ ವಾಹಿನಿ ಸಂಪೂರ್ಣ ಸುರಕ್ಷೆತೆ ಒದಗಿಸಿದೆ. ವಾರಾಂತ್ಯದಲ್ಲಿ ಪ್ರಸಾರವಾಗುವ ”’ವೀಕೆಂಡ್‌ ಕಾ ವಾರ್‌’ ಸಂಚಿಕೆಯ ಶೂಟಿಂಗ್‌ ಸಂಪೂರ್ಣ ಭದ್ರತೆಯೊಂದಿಗೆ ಮಾಡಲಾಗಿದೆ. ಸೆಟ್‌ಗೆ ಬರುವವರಿಗೆ ಆಧಾರ್‌ ಕಾರ್ಡ್‌ನ್ನು ಕಡ್ಡಾಯಗೊಳಿಸಿದ್ದು, ಯಾವುದೇ ರೀತಿಯ ಅನುಮಾನಾಸ್ಪದಗಳಿಗೆ ಅವಕಾಶ ನೀಡಲಾಗಿಲ್ಲ.

ಬಾಬಾ ಸಿದ್ದಿಕಿ ಹತ್ಯೆ , ಸಲ್ಲುಗೆ ವೈ ಪ್ಲಸ್‌ ಭದ್ರತೆ

ಅಕ್ಟೋಬರ್‌ 11 ರಂದು ಎನ್‌ .ಸಿ.ಪಿ ನಾಯಕ ಬಾಬಾ ಸಿದ್ದಿಕಿಯವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಸಲ್ಮಾನ್‌ ಖಾನ್‌ ಹಾಗೂ ಹಲವು ಬಾಲಿವುಡ್‌ ನಟ ನಟಿಯರ ಜೊತೆ ನಿಕಟ ಸಂಬಂಧ ಹೊಂದಿದ್ದರು. ಇದೀಗ ಸಿದ್ದಿಕಿಯನ್ನು ಗುಂಡಿಕ್ಕಿ ಕೊಂದಿದ್ದು , ಸಲ್ಮಾನ್‌ ಖಾನ್‌ಗೂ ಜೀವ ಬೆದರಿಕೆ ಬಂದಿದ್ದು, ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಕಡೆಯಿಂದ ಮುಂಬೈ ಟ್ರಾಫಿಕ್‌ ಪೋಲೀಸ್‌ಗೆ ಬೆದರಿಕೆ ಸಂದೇಶ ಬಂದಿದ್ದು ಸಲ್ಮಾನ್‌ ಖಾನ್‌ 5 ಕೋಟಿ ಕೊಡದಿದ್ದರೆ ಬಾಬಾ ಸಿದ್ಧಕಿಯನ್ನು ಕೊಲೆ ಮಾಡಿದಂತೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಸುದ್ದಿಯನ್ನೂ ಓದಿ: Salman Khan: 5 ಕೋಟಿ ರೂ ಕೊಡಿ… ಇಲ್ಲವೇ ಸಿದ್ದಿಕಿಗಿಂತಲೂ ಭೀಕರವಾಗಿ ಹತ್ಯೆ ಮಾಡ್ತೇವೆ; ಸಲ್ಮಾನ್‌ ಖಾನ್‌ಗೆ ಮತ್ತೆ ಬೆದರಿಕೆ

ಸಲ್ಮಾನ್‌ ಖಾನ್‌ಗೆ ಲಾರೆನ್ಸ್‌ ಬಿಷ್ಣೋಯಿ ಹಾಗೂ ಗ್ಯಾಂಗ್‌ ನಿರಂತರವಾಗಿ ಬೆದರಿಕೆ ಹಾಕುತ್ತಾ ಬಂದಿದ್ದು, ಸಲ್ಮಾನ್‌ ಬಿಷ್ಣೋಯಿ ಸಮಾಜದ ದೇವರ ಸಮಾನ ಎಂದು ಪೂಜಿಸುವ ಕೃಷ್ಣ ಮೃಗ ಬೇಟೆಯಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಲ್ಲಿಂದ ಇಲ್ಲಿವರೆಗೆ ಹಲವು ಬಾರಿ ಜೀವ ಬೆದರಿಕೆ ಬಂದಿದ್ದು, ಸಲ್ಮಾನ್‌ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು. ಸಲ್ಮಾನ್‌ ಖಾನ್‌ಗೆ ವೈ ಪ್ಲಸ್‌ ಭದ್ರತೆ ಒದಗಿಸಲಾಗಿದೆ. ಬೆಂಗಾವಲು ವಾಹನವನ್ನು ನಿಯೋಜಿಸಲಾಗಿದೆ. ಬೆದರಿಕೆ ಸಂದೇಶದ ತನಿಖೆ ಕೈಗೆತ್ತಿಕೊಂಡಿರುವ ಮುಂಬೈ ಪೋಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.