Self Harming: ಸಕ್ಸಸ್ ಕಾಣ್ತಿರುವಾಗಲೇ ಆತ್ಮಹತ್ಯೆಗೆ ಶರಣಾದ ನಟಿಯರು ಇವರೇ ನೋಡಿ
ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿಸ್ ಪುದುಚೇರಿ ಎಂದೇ ಖ್ಯಾತಿ ಪಡೆದ ಸ್ಯಾನ್ ರೆಚಲ್ ಅವರು ಸೋಶಿಯಲ್ ಇನ್ ಫ್ಲಿಯೆನ್ಸರ್ ಆಗಿ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದಿದ್ದರು. ಮಾಡೆ ಲಿಂಗ್ ಕ್ಷೇತ್ರದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಸ್ಯಾನ್ ರೆಚಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದಂತಾಗಿದೆ.



ಖ್ಯಾತ ಮಾಡಲ್ ಸ್ಟಾರ್ ಸ್ಯಾನ್ ರೆಚಲ್ ಅವರು ಜುಲೈ 5ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೂಡಲೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸ ಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಸರಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಿಸದೆ ಇಹ ಲೋಕ ತ್ಯೆಜಿಸಿದ್ದಾರೆ. ಅವರ ನಿಧನದಿಂದ ಆತ್ಮಹತ್ಯೆ ಮಾಡಿಕೊಂಡ ಸೆಲೆಬ್ರಿಟಿಗಳ ಕುರಿತು ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಏರ್ಪಡುತ್ತಿದೆ.

ಜಾಹೀರಾತು ಹಾಗೂ ನಟನ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಕುಲ್ಜೀತ್ ರಾಂಧವಾ ಅವರು ಫೆಬ್ರವರಿ 8, 2006 ರಂದು ಆತ್ಮಹತ್ಯೆ ನಿರ್ಧಾರ ಕೈಗೊಂಡು ಜೀವ ಕಳೆದುಕೊಂಡಿದ್ದಾರೆ. ಕುಲ್ಜೀತ್ ಅವರು ಮುಂಬೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು.

1997ರ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ವಿಜೇತೆಯಾದ ನಫೀಸಾ ಜೋಸೆಫ್ ಅವರು ಕೂಡ ಆತ್ಮಹತ್ಯೆಯಿಂದ ಜೀವನ ಅಂತ್ಯ ಕಂಡಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದ ನಫೀಸಾ ಜೋಸೆಫ್ ಅವರು ಜುಲೈ 29, 2004ರಂದು ಮುಂಬೈನ ತನ್ನ ಫ್ಲ್ಯಾಟ್ ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಕೇವಲ 26 ವರ್ಷಕ್ಕೆ ಅವರ ಜೀವನ ದುರಂತ ಅಂತ್ಯ ಕಂಡಿತು.

ನಟಿ-ಗಾಯಕಿ ಜಿಯಾ ಖಾನ್ ಅವರು ಜೂನ್ 3, 2013 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಸಿನಿಮಾರಂಗಕ್ಕೆ ದೊಡ್ಡ ಆಘಾತ ನೀಡಿದಂತಾಗಿದೆ. ತಮ್ಮ ಮುಂಬೈ ನಿವಾಸದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ಕೇವಲ 25 ವರ್ಷಕ್ಕೆ ಇವರು ಇಹಲೋಕ ತ್ಯೆಜಿಸಿದ್ದಾರೆ.

ನಟಿ ತುನಿಷಾ ಶರ್ಮಾ ಅವರು ಡಿಸೆಂಬರ್ 24, 2022 ರಂದು ನಿಧನರಾದರು. ದಸ್ತಾನ್-ಇ-ಕಾಬೂಲ್ ಸೀಸನ್ 1ರ ದೂರದರ್ಶನ ಧಾರಾವಾಹಿಯ ಸೆಟ್ನಲ್ಲಿ ತಮ್ಮ ಸಹನಟ ಶೀಜನ್ ಖಾನ್ ಅವರ ಮೇಕಪ್ ಕೋಣೆಯಲ್ಲಿ ನಟಿ ತುನಿಷಾ ಶರ್ಮಾ ಅವರು ನಿಧನರಾದರು. ಅವರು ಸಾವನಪ್ಪಿದಾಗ ಅವರಿಗೆ 20ವಯಸ್ಸು ಆಗಿತ್ತು..

ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಖ್ಯಾತಿಯ ನಟಿ ವೈಶಾಲಿ ಟಕ್ಕರ್ ಅವರು ಕೂಡ ಆತ್ಮಹತ್ಯೆ ಮಾಡಿ ಕೊಂಡು ಜೀವ ತ್ಯಜಿಸಿದ್ದಾರೆ. ಇವರು 2022ರ ಅಕ್ಟೋಬರ್ 15 ರಂದು ಆತ್ಮಹತ್ಯೆ ಮಾಡಿಕೊಂಡರು. ಕೇವಲ 30ನೇ ವಯಸ್ಸಿಗೆ ಸಾವನ್ನಪ್ಪಿದ್ದು ಅವರ ಅಭಿಮಾನಿಗಳಿಗೆ ಶಾಖ್ ಆಗಿತ್ತು.

ಬಾಲಿಕಾ ವಧು ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಅವರು ಏಪ್ರಿಲ್ 1, 2016 ರಂದು ಆತ್ಮಹತ್ಯೆಗೆ ಶರಣಾದರು. ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಆಗ ಅವರ ವಯಸ್ಸು 24 ವರ್ಷವಷ್ಟೇ ಆಗಿತ್ತು.

ಕಿರುತೆರೆ ನಟಿ ಸೇಜಲ್ ಶರ್ಮಾ ಅವರು ಮುಂಬೈನ ಮೀರಾ ರಸ್ತೆಯಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಜನವರಿ 19, 2020 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲ್ ತೋ ಹ್ಯಾಪಿ ಹೈ ಜಿ ಧಾರಾವಾಹಿಯ ಮೂಲಕ ಖ್ಯಾತರಾದ ಇವರು ಕೇವಲ 25 ವರ್ಷಕ್ಕೆ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡು ಜೀವನ ಅಂತ್ಯಗೊಳಿಸಿದರು.

26 ವರ್ಷದ ಸ್ಯಾನ್ ರೇಚಲ್ ಅವರು ಕೂಡ ನಿಧನರಾಗಿದ್ದಾರೆ. ಇವರು ಲಂಡನ್, ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ಸೇರಿದಂತೆ ಅನೇಕ ಕಡೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮಹಿಳಾ ಸುರಕ್ಷತಾ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರೆಚಲ್ ಅವರಿಗೆ 2022ರಲ್ಲಿ ಮಿಸ್ ಪುದುಚೇರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2023 ರಲ್ಲಿ ಮಿಸ್ ಆಫ್ರಿಕಾ ಗೋಲ್ಡನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.