Sunday, 15th December 2024

ಹಿರಿಯ ನಟ ಸತ್ಯಜಿತ್’ಗೆ ಅನಾರೋಗ್ಯ, ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ಅನಾರೋಗ್ಯಕ್ಕೀಡಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ. ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲು ತೆಗೆಯಲಾಗಿತ್ತು. ಮಧುಮೇಹ ಹಾಗೂ ಇನ್ನಿತರ ವಯೋಸಹಜ ಕಾಯಿಲೆ ಯಿಂದ ಬಳಲುತ್ತಿರುವ ಹಿರಿಯ ನಟ ತೀವ್ರ ಅನಾರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದಾರೆ.

ಕನ್ನಡದ ‘ಅಪ್ಪು’, ಅರಸು, ಆಪ್ತಮಿತ್ರ, ಅಭಿ ಸೇರಿದಂತೆ ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿರುವ ಸತ್ಯಜಿತ್ 2018ರಲ್ಲಿ ತೆರೆ ಕಂಡ ‘ಸೆಕೆಂಡ್ ಹಾಫ್’ ಚಿತ್ರದ ಬಳಿಕ ಅಭಿನಯದಿಂದ ದೂರ ಸರಿದಿದ್ದರು.