Friday, 22nd November 2024

Sandalwood Cup 2024: ಬ್ಯಾಡ್ಮಿಂಟನ್ ಟೂರ್ನಿಗೆ ತೆರೆ; ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡಕ್ಕೆ ವಿಜಯಮಾಲೆ

Sandalwood Cup 2024

ಬೆಂಗಳೂರು: ಸ್ಯಾಂಡಲ್‌ವುಡ್ ಕಪ್-2024 (Sandalwood Cup 2024) ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ತೆರೆ ಬಿದ್ದಿದೆ. ಸೆಪ್ಟೆಂಬರ್ 28-29ರಂದು ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡ ಕಪ್ ಗೆದ್ದಿದ್ದು, ಸೃಜನ್ ನಾಯಕತ್ವದ ಅಪ್ಪು ಪ್ಯಾಂಥರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ತಂತ್ರಜ್ಞರು, ಮಾಧ್ಯಮದವರು ಭಾಗಿಯಾಗಿ ಪಂದ್ಯಾವಳಿಯನ್ನು ಮತ್ತಷ್ಟು ರಂಗು ತುಂಬಿದರು.

ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಅಪ್ಪು ಪ್ಯಾಂಥರ್ಸ್‌ನ ಮಂಜಯ್ಯ, ಪ್ರವೀಣ – ಪ್ಲೇಯರ್ಸ್ ಆಫ್ ದಿ ಮ್ಯಾಚ್ ಪಡೆದುಕೊಂಡರೆ, ಮನುರಂಜನ್-ಪ್ರವೀಣ ಅವರ ರಣಧೀರ ರೈಡರ್ಸ್ ತಂಡ ಶ್ರೇಷ್ಠ ಮೆನ್ಸ್ ಡಬಲ್ಸ್ ತಂಡವಾಗಿ ಹೊರಹೊಮ್ಮಿದೆ. ಶ್ರೇಷ್ಠ ವುಮೆನ್ಸ್ ಡಬಲ್ಸ್ ಆಗಿ ಅಪ್ಪು ಪ್ಯಾಂಥರ್ಸ್ ವಾಣಿಶ್ರೀ-ನಯನ, ಶ್ರೇಷ್ಠ ಮಿಕ್ಸ್ಡ್ ಡಬಲ್ಸ್ ರಣಧೀರ ರೈಡರ್ಸ್‌ನ ಕಾರ್ತಿಕ್-ಪ್ರವೀಣ ಅವರಿಗೆ ಸಿಕ್ಕಿದೆ. ಶ್ರೇಷ್ಠ ಕ್ಯಾಪ್ಟನ್ ಪಟ್ಟ ಅಮೃತವರ್ಷಿಣಿ ಅವೆಂಜರ್ಸ್‌ನ ವಿಕ್ರಮ್ ರವಿಚಂದ್ರನ್ ಪಡೆದುಕೊಂಡರೆ, ರಣಧೀರ ರೈಡರ್ಸ್‌ನ ಮಂಜು, ಸನೀಲ್, ಸ್ಪರ್ಶ ಶ್ರೇಷ್ಠ ಟ್ರಯೋ ಆಗಿ ಹೊರಹೊಮ್ಮಿದ್ದಾರೆ.

ಸ್ಯಾಂಡಲ್‌ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಮನರಂಜನೆ ಉದ್ದೇಶದಿಂದ ಶುರು ಮಾಡಿರುವುದಲ್ಲ. ಬದಲಾಗಿ ಒಂದೊಳ್ಳೆ ಕಾರ್ಯ ಇಟ್ಟುಕೊಂಡು ಈ ಕಪ್ ಪ್ರಾರಂಭಿಸಲಾಗಿದೆ. ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು , ವಿತರಕರು, ನಿರ್ಮಾಪಕರು ಕಷ್ಟದಲ್ಲಿರುವ ಸಹಾಯ ಮಾಡುವುದು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯ.

ಹಿರಿಯ ನಿರ್ಮಾಪಕರಾದ ಸಾ.ರಾ. ಗೋವಿಂದ್, ಭಾ.ಮಾ ಹರೀಶ್, ಭಾ.ಮಾ.ಗಿರೀಶ್ ಎನ್.ಎಂ. ಸುರೇಶ್, ಎ.ಗಣೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರವೀಣ್ ಕುಮಾರ್, ಜಯಸಿಂಹ ಮೂಸರಿ ನೇತೃತ್ವದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆದಿದೆ. ಇವರೆಲ್ಲರು ಇಡೀ ಇಂಡಸ್ಟ್ರೀಯಲ್ಲಿ ಒಗ್ಗೂಡಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Kannada New Movie: ನವರಾತ್ರಿಗೆ “ಗೋಪಿಲೋಲ” ನ ಆಗಮನ; ಚಿತ್ರದ ಪೋಸ್ಟರ್‌ ರಿಲೀಸ್‌

ಸ್ಯಾಂಡಲ್‌ವುಡ್ ಕಪ್-2024 ಬ್ಯಾಡ್ಮಿಂಟನ್ ಟೂರ್ನಮೆಂಟ್ ಸಮಾರೋಪ ಸಮಾರಂಭಕ್ಕೂ ಮೊದಲ ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಸಂಗೀತ ಸುಧೆ ಹರಿಸಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.