Saturday, 14th December 2024

ಸ್ಯಾಂಡಲ್’ವುಡ್ ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವಾ ಸೇರಿ ಐವರಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ, ರಾಗಿಣಿಗೆ ಕೋರ್ಟ್ ಜಾಮೀನು ನೀಡಿತ್ತು. ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆದಿತ್ಯ ಆಳ್ವಾ ಸೇರಿದಂತೆ ಐವರಿಗೆ ಎನ್ ಡಿ ಪಿಎಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆದಿತ್ಯ ಆಳ್ವಾ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಎನ್ ಡಿ ಪಿಎಸ್ ಕೋರ್ಟ್ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಜೈಲು ಸೇರಿದ್ದ ಆದಿತ್ಯ ಆಳ್ವಾ, ರವಿಶಂಕರ್, ರಾಹುಲ್, ಆದಿತ್ಯ ಅಗರ್ವಾಲ್ ಮತ್ತು ವಿರೇನ್ ಖನ್ನಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.