Thursday, 12th December 2024

ಜೈಲು ಪಾಲಾಗಿರುವ ಸಂಜನಾಗೆ ಇಂದು ಹುಟ್ಟುಹಬ್ಬ

ಬೆಂಗಳೂರು: ಹೈಫೈ ಪಾರ್ಟಿಗಳ ಮೂಲಕ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದ ಸಂಜನಾ ಈ ಬಾರಿ ಜೈಲಿನ ಲ್ಲಿಯೇ ಹುಟ್ಟುಹಬ್ಬದ ದಿನ ಕಳೆಯುವಂತಾಗಿದೆ. ನಟಿ ರಾಗಿಣಿಯೊಂದಿಗೆ ಜೈಲಲ್ಲಿ ಜಗಳವಾಡಿಕೊಂಡಿದ್ದ ಸಂಜನಾರನ್ನು ಬೇರೆ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇವತ್ತು ಹುಟ್ಟುಹಬ್ಬದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗರ್ಲಾನಿ ಕಳೆದ ವರ್ಷ ಅಭಿಮಾನಿಗಳು, ಕುಟುಂಬದವರು ಹಾಗೂ ಆತ್ಮೀಯರೊಂದಿಗೆ ಅದ್ದೂರಿ ಯಾಗಿ ಜನ್ಮದಿನ ಆಚರಿಸಿಕೊಂಡಿದ್ದರು.