Sunday, 8th September 2024

ಸಂಜನಾಗಿಲ್ಲ ಮನೆ ಊಟದ ಭಾಗ್ಯ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿಗೆ ಜೈಲೂಟವೇ ಗತಿಯಾಗಿದೆ.

ಆಕೆಯನ್ನು ಭೇಟಿ ಮಾಡಲು ಬಂದಿದ್ದ ತಂದೆ ಮನೋಹರ್ ಹಾಗೂ ತಾಯಿ ರೇಷ್ಮಾ ಅವರು ಮಗಳಿಗಾಗಿ ಬಟ್ಟೆ, ಊಟ ಹಾಗೂ ಸಿಹಿ ತಿನಿಸು ತಂದಿಟ್ಟರೂ, ಜೈಲು ಸಿಬ್ಬಂದಿ ವರ್ಗ ಅದನ್ನು ವಾಪಸ್ ಕಳಿಸಿದ್ದಾರೆನ್ನಳಾಗಿದೆ. ಚಾಕೋಲೆಟ್, ಬಟ್ಟೆಗಳಿದ್ದ ಬ್ಯಾಗನ್ನು ಪೊಲೀಸರಿಗೆ ಬ್ಯಾಗ್ ನೀಡಿ ಪೋಷಕರು ವಾಪಸ್ ಆಗಿದ್ದಾರೆ. ಆದರೆ, ಸಿಬ್ಬಂದಿ ಮನೆ ಊಟ ವಾಪಸ್ ಕಳುಹಿಸಿದ್ದಾರೆ.

ಸಂಜನಾ ಮಾತ್ರವಲ್ಲದೇ, ಇನ್ನೋರ್ವ ನಟಿ ರಾಗಿಣಿ ದ್ವಿವೇದಿ ಹಾಗೂ ಡ್ರಗ್ ಪೆಡ್ಲರ್ ಗಳು ಜೈಲುವಾಸ ಅನುಭವಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!