Sunday, 24th November 2024

ನಟ ಸಯಾಜಿ ಶಿಂಧೆಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಹೈದರಾಬಾದ್​: ಬಹುಭಾಷ ಖಳನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಹುತಾಹುಟಿನ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್‌ ಇರುವುದಾಗಿ ಹೇಳಿದ್ದಾರೆ.

ಮರಾಠಿ, ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಖಳನಟನ ಪಾತ್ರ ಮಾಡಿ ಅಭಿಮಾನಿಗಳ ಮನಗೆದ್ದ ನಟ ಸಯಾಜಿ ಶಿಂಧೆ ಅವರ ಬಗ್ಗೆ ತೆಲುಗು, ತೆಲುಗು ಪ್ರೇಕ್ಷಕರಿಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. ಏಕೆಂದರೆ, ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಖಳನಾಯಕನಾಗಿ, ತಂದೆಯಾಗಿ, ಪೋಷಕ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

ವೈದ್ಯರು ಮಾತನಾಡಿ, ಕೆಲವು ದಿನಗಳ ಹಿಂದೆ ಸಯಾಜಿ ಶಿಂಧೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದ್ದರಿಂದ ನಾವು ಕೆಲವು ಸಾಮಾನ್ಯ ಪರೀಕ್ಷೆಗಳನ್ನು ಮಾಡಿದ್ದೇವೆ. ಆಗ ನಾವು ಇಸಿಜಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ನೋಡಿದ್ದೇವೆ.

ನಾವು ಅವರಿಗೆ ಆಂಜಿಯೋಗ್ರಫಿ ಮಾಡಲು ಸಲಹೆ ನೀಡಿದ್ದೆವು. ಆಂಜಿಯೋಗ್ರಫಿ ಮಾಡಿದ ನಂತರ ಹೃದಯದಲ್ಲಿ ವಾಲ್ಸ್​ಗಳು ಚೆನ್ನಾಗಿರುವುದು ಕಂಡು ಬಂತು. ಆದರೆ ಬಲಭಾಗದ ರಕ್ತನಾಳದಲ್ಲಿ ಮಾತ್ರ ಸ್ವಲ್ಪ್​ ಬ್ಲಾಕ್​ ಆಗಿದೆ. ಶಿಂಧೆ ಅವರಿಗೆ ಚಿಕಿತ್ಸೆ ನೀಡು ವಾಗ ಸಂಪೂರ್ಣವಾಗಿ ಸಹಕರಿಸಿದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಸಯಾಜಿ ಶಿಂಧೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸು ತ್ತಿದ್ದಾರೆ.

ಶಿಯಾಜಿ ಶಿಂಧೆ ಮರಾಠಿ ರಂಗನಟರಾಗಿ ಸಿನಿ ಲೋಕಕ್ಕೆ ಕಾಲಿಟ್ಟರು. ಅದರಲ್ಲೂ ಏಕಪಾತ್ರಾಭಿನಯದಲ್ಲಿ ಅವರ ನಟನೆಗೆ ಒಳ್ಳೆಯ ಹೆಸರು ಬಂತು. ಮರಾಠಿ ರಂಗನಟರಾಗಿದ್ದ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹಿಂದಿ ಚಿತ್ರಗಳಲ್ಲಿ. ಅವರು 1990 ರಲ್ಲಿ ‘ದಿಶಾ’ ಚಿತ್ರದ ಮೂಲಕ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಮಹಾರಾಷ್ಟ್ರ ಮೂಲದ ಅವರು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ವೀರ ಕನ್ನಡಿಗ ಚಿತ್ರದಲ್ಲಿ ಖಳನಾಯಕ ನಾಗಿ ಗುರುತಿಸಿಕೊಂಡು ತಮ್ಮ ನಟನೆ ಮೂಲಕ ಅಪ್ಪು ಅಭಿಮಾನಿಗಳ ಮನ ಗೆದ್ದಿದ್ದರು.