Sunday, 8th September 2024

ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ ದಿಗಂತ್

ಬೆಂಗಳೂರು: ಸ್ಯಾಂಡಲ್ ವುಡ್‍ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.

ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಮಾತನಾಡಿ, ಸಿಸಿಬಿಗೆ ನನ್ನ ಬಳಿಯಿದ್ದ ಅಗತ್ಯ ಮಾಹಿತಿ ನೀಡಿರುವೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ತನಿಖೆ ಪ್ರಗತಿ ಯಲ್ಲಿರುವ ಕಾರಣ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ ಎಂದರು.

ಬೆಂಗಳೂರಿನ ಹೆಚ್‍ಎಂಟಿ ಬಳಿ “ಮಾರಿಗೋಲ್ಡ್ ” ಚಿತ್ರೀಕರಣ ನಡೆಯುತ್ತಿದ್ದು ಅಲ್ಲಿಂದಲೇ ದಿಗಂತ್ ನೇರವಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಒಂದು ವಾರದ ಹಿಂದಷ್ಟೇ ನಟ ದಿಗಂತ್ ಹಾಗೂ ಅವರ ಪತ್ನಿ ನಟಿ ಐಂದ್ರಿತಾ ರೇ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!