Sunday, 15th December 2024

ಹಿರಿಯ ಪೋಷಕ ನಟಿ ಬಿ.ಜಯಾ ನಿಧನ

ಬೆಂಗಳೂರು:  ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಗುರುವಾರ ನಿಧನರಾಗಿದ್ದಾರೆ.

300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿ ದ್ದರು. ರಂಗಭೂಮಿ ಹಿನ್ನೆಲೆ ಯಿಂದ ಬಂದಿದ್ದ ಬಿ.ಜಯಾ ಸಿನಿಮಾ ಜೊತೆಗೆ ಹಲವಾರು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.

ವರ ನಟ ಡಾ.ರಾಜಕುಮಾರ್ ಅವರ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅವರು ಅಭಿನಯಿಸಿ ದ್ದಾರೆ. ಅನೇಕ ದಿಗ್ಗಜರ ಚಿತ್ರಗಳಲ್ಲಿ ಅಭಿನಯಿಸಿದ ಜಯಾ ಅವರು ನಿಧನದ ಹಿನ್ನಲೆಯಲ್ಲಿ ಸ್ಯಾಂಡ ಲ್ವುಡ್ ಕಂಬನಿ ಮಿಡಿದಿದೆ.