Friday, 22nd November 2024

Shah Rukh Khan: ಬಾಲಿವುಡ್ ಬಾದ್ ಷಾ ಶಾರುಖ್ ಖಾನ್‍ಗೂ ಜೀವ ಬೆದರಿಕೆ- ಕರೆ ಮಾಡಿದಾತ ಹೇಳಿದ್ದೇನು ಗೊತ್ತಾ?

Shah Rukh Khan

ಮುಂಬೈ : ಚಿತ್ರರಂಗದಲ್ಲಿ ಸೂಪರ್ ಸ್ಟಾರ್‌ಗಳಿಗೆ ಹಣಕ್ಕಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಬೆದರಿಕೆ ಕರೆಗಳು ಬರುವುದು ಸಾಮಾನ್ಯವಾಗಿದೆ. ಈ ಮೊದಲು ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಅವರಿಗೆ ಬೆದರಿಕೆ ಕರೆಗಳು ಬಂದಿರುವುದರ ಕುರಿತು ಸುದ್ದಿಯಾಗಿತ್ತು. ಈಗ ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅವರಿಗಗೂ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.  

ನಟ ಶಾರುಖ್ ಖಾನ್‍ ಬೆದರಿಕೆ ಕರೆ ಬಂದ ತಕ್ಷಣ  ಬಾಂದ್ರಾ ಪೊಲೀಸರಿಗೆ ಮಾಹಿತಿ ನೀಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕರೆ ಛತ್ತೀಸ್‍ಗಢದಿಂದ ಬಂದಿರುವುದಾಗಿ  ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಪಟ್ಟ  ಫೈಜಾನ್ ಖಾನ್ ಎಂಬ ವ್ಯಕ್ತಿಯನ್ನು ಅಧಿಕಾರಿಗಳು ಹುಡುಕುತ್ತಿದ್ದಾರಂತೆ. ಘಟನೆಯ ಬಗ್ಗೆ ರಾಯ್ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆಗಾಗಿ ಅವರನ್ನು ನಿಯೋಜಿಸಲಾಗಿದೆ.

50 ಲಕ್ಷ ರೂ.ಗಳನ್ನು ನೀಡುವಂತೆ ಶಾರುಖ್ ಖಾನ್ ಅವರಿಗೆ  ಕರೆ ಮಾಡಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ. ತನ್ನ ಗುರುತು ಮತ್ತು ಸ್ಥಳದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ತನ್ನನ್ನು ‘ಹಿಂದೂಸ್ತಾನಿ’ ಎಂದು ಕರೆಯುವಂತೆ ಅವನು ಪೊಲೀಸರಿಗೆ ಹೇಳಿದ್ದಾನೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್‍ ಅವರಿಗೆ ಕೊಲೆ ಬೆದರಿಕೆ ಬಂದ ನಂತರ ಅವರ ಭದ್ರತೆಯನ್ನು ವೈ + ಮಟ್ಟಕ್ಕೆ ಹೆಚ್ಚಿಸಲಾಯಿತು. ಇದರಂತೆ ಅವರೊಂದಿಗೆ ದಿನದ 24 ಗಂಟೆಯೂ ಆರು ಸಶಸ್ತ್ರ ಸಿಬ್ಬಂದಿ ನಿಯೋಜಿಸಲಾಗಿತ್ತು.

ಇದನ್ನೂ ಓದಿ:ಸೀಟಿಗಾಗಿ ಹೋರಾಡಬೇಕಿಲ್ಲ…ಜಗಳ ಮಾಡೋ ಅಗತ್ಯ ಇಲ್ಲವೇ ಇಲ್ಲ…ಈತನ ಜಾಣ್ಮೆಗೆ ನೆಟ್ಟಿಗರು ಫುಲ್‌ ಫಿದಾ!

ಈ ಹಿಂದೆ ನಟ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನಿಂದ  ಇದೇ ರೀತಿ ಹಣಕ್ಕಾಗಿ ಬೆದರಿಕೆ ಕರೆ ಬಂದಿತ್ತು. ಕೃಷ್ಣಮೃಗ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿರುವ ಗ್ಯಾಂಗ್, ನಟ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಅಥವಾ ಬದಲಿಗೆ 5 ಕೋಟಿ ರೂ.ಗಳನ್ನು ಪಾವತಿಸಬೇಕು ಎಂದು ಹೇಳಿದೆ. ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭಿಖಾರಾಮ್ ಜಲರಾಮ್ ಬಿಷ್ಣೋಯ್ ಎಂಬ ವ್ಯಕ್ತಿಯನ್ನು ಕರ್ನಾಟಕದಲ್ಲಿ ಬಂಧಿಸಲಾಗಿತ್ತು. ಹಾಗೇ ಅಕ್ಟೋಬರ್ 30 ರಂದು ಸಲ್ಮಾನ್‍ ಖಾನ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಇದೇ ರೀತಿಯ ಕೊಲೆ ಬೆದರಿಕೆ ಬಂದಿದ್ದು, ಅವರು ಅವರಿಂದ 2 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದರು. ಅಕ್ಟೋಬರ್ 12 ರಂದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ನಂತರ ನಟನ ಭದ್ರತೆಯನ್ನು ಹೆಚ್ಚಿಸಲಾಗಿತ್ತು.