Monday, 16th September 2024

ನಟ ಶರತ್ ಕುಮಾರ್’ಗೆ ಕೊರೋನಾ ಪಾಸಿಟಿವ್

ಚೆನ್ನೈ : ರಾಜಕುಮಾರ, ಯುವರತ್ನ, ಸೀತಾರಾಮ ಕಲ್ಯಾಣ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ ಶರತ್ ಕುಮಾರ್ ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ನಟ ಶರತ್ ಕುಮಾರ್, ಪತ್ನಿ ರಾಧಿಕಾ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನಟಿ ಹಾಗೂ ಪತ್ರಿ ವರ ಲಕ್ಷ್ಮೀ ಶರತ್ ಕುಮಾರ್ ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಅವರ ಪುತ್ರಿ ವರಲಕ್ಷ್ಮೀ ಟ್ವಿಟ್ ಮಾಡಿದ್ದು, ತಮ್ಮ ತಂದೆ ನಟ ಶರತ್ ಕುಮಾರ್ ಹಾಗೂ ತಾಯಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಸಂಪರ್ಕ ದಲ್ಲಿರುವವರು ಕೊರೋನಾ ಸೋಂಕಿನ ಲಕ್ಷಣಗಳಿದ್ದರೆ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *