Friday, 15th November 2024

BBK 11: ನನ್ ಎಕ್ಕಡ ತಗೊಂಡ್ ನಾನೇ ಹೊಡ್ಕೋಬೇಕು, ಥೂ..: ಚೈತ್ರಾ ಮೇಲೆ ಕಡಿಮೆಯಾಗದ ಶಿಶಿರ್ ಕೋಪ

Shishir and Chaithra kundapura

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ನೀಡುತ್ತಿರುವ ಒಂದೊಂದು ಟಾಸ್ಕ್ ವೀಕ್ಷಕರನ್ನು ಹಿಡಿದು ಕೂರಿಸಿದೆ. ಸದ್ಯ ಮನೆಯಲ್ಲಿ ಜೋಡಿ ಟಾಸ್ಕ್ ನಡೆಯುತ್ತಿದೆ. ಸ್ವತಃ ಬಿಗ್ ಬಾಸ್ ಅವರೇ ಮನೆಯ ಸದ್ಯರನ್ನು ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಶಿಶಿರ್ ಶಾಸ್ತ್ರೀ ಹಾಗೂ ಚೈತ್ರಾ ಕುಂದಾಪುರ ಜೋಡಿಯಾಗಿದ್ದಾರೆ. ಆದರೆ, ಚೈತ್ರಾ ತೆಗೆದುಕೊಂಡ ಒಂದು ನಿರ್ಧಾರ ಇವರಿಬ್ಬರ ನಡುವಣ ಮನಸ್ತಾಪಕ್ಕೆ ಕಾರಣವಾಗಿದೆ.

ಟ್ವಿಸ್ಟ್ ಕೊಟ್ಟಿದ್ದ ಬಿಗ್ ಬಾಸ್

ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಕೆಲವರಿಗೆ ಬಿಗ್ ಬಾಸ್‌ ಆಫರ್ ಕೊಟ್ಟಿದ್ದಾರೆ. ಈ ಆಫರ್‌ನ ಚೈತ್ರಾ ಕುಂದಾಪುರ ಒಪ್ಪಿಕೊಂಡುಬಿಟ್ಟಿದ್ದಾರೆ. ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಮೇಲೆ ಕೆಂಡಾಮಂಡಲರಾಗಿದ್ದಾರೆ. ನಾಮಿನೇಷನ್ ವಿಚಾರದಲ್ಲಿ ಜೋಡಿಗಳು ತಮ್ಮಲ್ಲೇ ಚರ್ಚಿಸಿ ತಮ್ಮಿಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಬಂದಾಗ ಚೈತ್ರಾ ಅವರನ್ನ ಶಿಶಿರ್ ಸೇಫ್ ಮಾಡಿ ಶಿಶಿರ್ ನಾಮಿನೇಟ್ ಆಗಿದ್ದರು. ಹೀಗಿದ್ದರೂ ಚೈತ್ರಾ ತನ್ನ ಜೋಡಿಗೆ ಮೋಸ ಮಾಡಿದ್ದಾರೆ ಎಂಬುದು ಅವರ ಆರೋಪ.

ಶಿಶಿರ್ ಅವರ ಕೋಪ ಇನ್ನೂ ಕಡಿಮೆ ಆಗಿಲ್ಲ. ಟಾಸ್ಕ್​ನಲ್ಲಿ ಜೊತೆಯಾಗಿ ಆಡುತ್ತಿದ್ದಾರೆಯಾದರೂ ಮೊದಲಿನಂತೆ ಇನ್ವಾಲ್ಮೆಂಟ್ ಕಾಣಿಸುತ್ತಿಲ್ಲ. ಕಾಲಿನಲ್ಲಿ ಬಾಕ್ಸ್ ಹಿಡಿದುಕೊಳ್ಳುವ ಟಾಸ್ಕ್​ನಲ್ಲಿ ಈ ಜೋಡಿಯೇ ಮೊದಲು ಔಟ್ ಆಗಿ ಹೊರಬಂತು. ಚೈತ್ರಾ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದರೂ ಶಿಶಿರ್ ರೇಗಾಡುತ್ತಲೇ ಇದ್ದರು.

ನಾನು ಫೂಲ್‌. ಜೋಡಿಯಾದಾಗ ಮಾತುಗಳು ಸಖತ್ತಾಗಿ ಬರುತ್ತೆ. ಇದಕ್ಕಿಂತ ಜೋಡಿ ಇಲ್ಲ ಅಂತೆಲ್ಲಾ ಹೇಳ್ತಾರೆ. ಬರೀ ಮಾತು. ಇವರನ್ನ ನಂಬ್ತೀವಲ್ಲ ನಾವು ನಮ್ಮ ಎಕ್ಕಡ ತಗೊಂಡು ನಾವೇ ಹೊಡೆದುಕೊಳ್ಬೇಕು. ಥೂ.. ಎಂದು ಶಿಶಿರ್‌ ತಮ್ಮ ಅಸಮಾಧಾನವನ್ನ ಹೊರಹಾಕಿದರು. ನಾನು ಬೆಲ್ಟ್ ಹಾಕಲ್ಲ. ನನ್ನನ್ನ ಯಾರೂ ಕನ್ವಿನ್ಸ್ ಮಾಡಬೇಡಿ. ಯಾರು ಏನೇ ಹೇಳಿದರೂ ನಾನು ಹಾಕಲ್ಲ. ಹಾಗ್ನೋಡಿದ್ರೆ, ನಾವಿಬ್ಬರೂ ನಾಮಿನೇಟ್ ಆಗಬಹುದಿತ್ತು. ಅಲ್ಲೇನಾಯ್ತು ಅನ್ನೋದು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದರೆ.

ನಾನೇನು ಕಡ್ಲೆಪುರಿ ತಿಂತಿದ್ನಾ ಇಷ್ಟು ದಿನ. ತ್ರಿವಿಕ್ರಮ್ ಅವರು ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ ಎಂದು ಚೈತ್ರಾ ತಮ್ಮ ಕಾರಣ ಒದಗಿಸಿದ್ದಾರೆ. ಮಾನಸಿಕ ಅನ್ನೋ ಕಾರಣ ಕೊಡ್ತಾರೆ, ಇಷ್ಟು ದಿನ ಮಾನಸಿಕ ಏನಾಗಿತ್ತು?, ನಾಮಿನೇಷನ್​ ಅಂತಾ ಬಂದಾಗ ಅಯ್ಯೋ ಅಮ್ಮಾ ಅಂತಾ ಹೇಳಿಬಿಡ್ತಾರೆ. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್​​ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BBK 11: ಟಿಆರ್​ಪಿಯಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದ ಬಿಗ್ ಬಾಸ್: ವಾರದ ಕತೆಗೆ ಅಮೋಘ ರೆಸ್ಪಾನ್ಸ್