Sunday, 15th December 2024

ಬಿಳಿ ಗಡ್ಡ ಹೊತ್ತ ’ವೇದ’ ಲುಕ್‌ನಲ್ಲಿ ಹ್ಯಾಟ್ರಿಕ್‌ ಹೀರೋ

ಬೆಂಗಳೂರು : ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಬಳಗಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ 125ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ತಮ್ಮ ಹೊಸ ಸಿನಿಮಾ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿ ನೀಡಿದ್ದಾರೆ. ಶಿವಣ್ಣ ಫೇಸ್‍ಬುಕ್ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾ ಘೋಷಣೆಯ ಸುಳಿವು ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರ 125 ಸಿನಿಮಾ ಶೀರ್ಷಿಕೆ ‘ವೇದ’. ಭಜರಂಗಿ ಸಿನಿಮಾದ ಎ.ಹರ್ಷ ‘ವೇದ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ನಿರ್ಮಾಪಕಿ ಹಾಗೂ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

‘ವೇದ’ ಚಿತ್ರದ ಲುಕ್ ಖಡಕ್ ಆಗಿದೆ. ಮುಖದ ಮೇಲೆ ಬಿಳಿ ಗಡ್ಡ ಹೊತ್ತು ಕಾಣಿಸಿಕೊಂಡಿರುವ ಶಿವಣ್ಣನ ಖದರ್ ಅಭಿಮಾನಿ ಗಳಲ್ಲಿ ಥ್ರಿಲ್ ಮೂಡಿಸಿದೆ. ಚಿತ್ರಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಇದು 1960’ರ ಬ್ಯಾಕ್‍ಡ್ರಾಪ್ ಕಥೆ ಹೊಂದಿದೆ ಎನ್ನುವುದು ಚಿತ್ರತಂಡ ಸುಳಿವು ನೀಡಿದೆ.

ಇನ್ನು ಶೀಘ್ರದಲ್ಲೇ ‘ಭಜರಂಗಿ 2’ ಸಿನಿಮಾ ತೆರೆ ಮೇಲೆ ಬರಲಿದೆ.