ಜಿ ಸ್ಟುಡಿಯೋಸ್ ಸಹಯೋಗದಲ್ಲಿ ತಮ್ಮದೇ ಸ್ವಂತ ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ವೇದ ಶಿವಣ್ಣ ನಿಗೆ ವಿಶೇಷವಾಗಿದೆ. ಈಗ ತನ್ನ ಪತ್ನಿ ಗೀತಾ 125ನೇ ಚಿತ್ರವನ್ನು ನಿರ್ಮಿಸಿದ್ದಾರೆ.
ವೃತ್ತಿಜೀವನದಲ್ಲಿ ಎಂದಿಗೂ ಗುರಿ ಹೊಂದಿರಲಿಲ್ಲ, ಬಂದ ಕೆಲಸವನ್ನು ಆನಂದಿಸುತ್ತೇನೆ ಎನ್ನುವ ಶಿವಣ್ಣ, ನನ್ನ ಚಿತ್ರಗಳು ವಿವಿಧ ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು, ನಟರೊಂದಿಗೆ ಸಹಕರಿಸುವಂತೆ ಮಾಡಿತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಕಲೆಕ್ಷನ್ ಮಾಡಿತು ಎಂಬುದು ಸೆಕೆಂಡರಿ ವಿಚಾರ, ಆದರೆ, ನನ್ನ ಚಿತ್ರಗಳು ನಿರ್ಮಾಪಕರನ್ನು ಸುರಕ್ಷಿತ ವಲಯದಲ್ಲಿ ಇಟ್ಟಿದ್ದ ರಿಂದ ನನ್ನ ಮೇಲೆ ಹೂಡಿಕೆ ಮಾಡಲು ನಿರ್ಮಾಪಕರು ಬಯಸುತ್ತಿರುವುದನ್ನು ತಿಳಿದು ಸಂತೋಷವಾಗುತ್ತದೆ ಎಂದರು.
ಹರ್ಷ ಪ್ರತಿಯೊಂದು ಚಿತ್ರದಲ್ಲೂ ಅಪಾರ ಕ್ರಿಯೇಟಿವಿಟಿ ತರುತ್ತಿದ್ದಾರೆ. ವೇದ ಕೂಡಾ ವಿಭಿನ್ನವಾಗಿದೆ. ಕಮರ್ಷಿಯಲ್, ಸಸ್ಪೆನ್ಸ್ ಅಂಶ ಸೇರಿದಂತೆ ಎಲ್ಲವನ್ನು ಹದವಾಗಿ ಬೆರೆಸಿ ಉತ್ತಮ ಸಂದೇಶ ನೀಡಿರುವುದು ನನಗೆ ಇಷ್ಟವಾಯಿತು ಎಂದು ಶಿವಣ್ಣ ಹೇಳಿದರು.
Read E-Paper click here