Saturday, 30th September 2023

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶೋಭಿತಾ ಶಿವಣ್ಣ

ಬೆಂಗಳೂರು: ಬ್ರಹ್ಮಗಂಟು’ ನಟಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬ್ರಹ್ಮಗಂಟು ಧಾರವಾಹಿಯಲ್ಲಿ ಪಿಂಕಿ ಎಂಬ ವಿಲನ್‌ ಪಾತ್ರಧಾರಿಯಾಗಿ ಕನ್ನಡಿಗರ ಮನಗೆದ್ದಿದ್ದರು. ಬ್ರಹ್ಮಗಂಟು ನಟಿ ಶೋಭಿತಾ ಶಿವಣ್ಣ ಮೂಲತಃ ಸಕಲೇಶಪುರದವರು. ಸದ್ಯ ವಿವಾಹದ ಪೋಟೊಗಳಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಇನ್ನು ಇವರ ಮದುವೆಗೆ ನಟಿ ಶೋಭಿತಾ ಮದುವೆಗೆ ಪ್ರಿಯಾಂಕಾ ಚಿಂಚೋಳಿ, ಸ್ವಾತಿ, ನಟಿ ವೀಣಾ ರಾವ್, ದಮಯಂತಿ ನಾಗರಾಜ್ ಸೇರಿದಂತೆ ಹಲವರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಕೋರಿ ದ್ದಾರೆ. ಶೋಭಿತಾ ಶಿವಣ್ಣ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಗೂ ಪಾದರ್ಪಾಣೆ ಮಾಡಿದ್ದಾರೆ.

‘ವಂದನಾ’, ‘ಅಟೆಂಪ್ಟ್‌ ಟು ಮರ್ಡರ್‌’, ‘ಜಾಕ್‌ಪಾಟ್’ ಅಂತಹ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ. ಸದ್ಯ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಕೂಡ ವಿಲನ್ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೊ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನವ ದಂಪತಿಯ ಫೋಟೋ ವನ್ನು ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.

error: Content is protected !!