Thursday, 12th December 2024

ನಟಿ ಶ್ರದ್ಧಾ ಶ್ರೀನಾಥ್ 33ನೇ ಹುಟ್ಟುಹಬ್ಬ

ಕೇರಳ: ಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಶುಕ್ರವಾರ 33ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಸೆಲಿಬ್ರೇಟ್ ಮಾಡಿದ್ದಾರೆ.

2015 ರಲ್ಲಿ ತೆರೆಕಂಡ ಮಲಯಾಳಂ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು ಅದೇ ವರ್ಷ ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾ ದಾರಿತ ‘ಯೂ ಟರ್ನ್’ ಸಿನಿಮಾದಲ್ಲಿ ಅಭಿನಯಿಸಿದರು.

ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್ ಇತ್ತೀಚೆಗೆ ಕನ್ನಡದ ‘ರುದ್ರ ಪ್ರಯಾಗ್’ ಚಿತ್ರದ ಶೂಟಿಂಗ್ ನಲ್ಲಿದ್ದು ತಮಿಳಿನಲ್ಲಿ ‘ಕಲಿಯುಗಂ’ ಮತ್ತು ‘ಲೆಟರ್ ಟು ಕನ್ನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಕಲಾವಿದರು ಹಾಗೂ ಅವರ ಸ್ನೇಹಿತರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.