ಮುಂಬೈ: ಹೃದಯಾಘಾತದಿಂದ ಮೃತಪಟ್ಟ ನಟ ಸಿದ್ಧಾರ್ಥ್ ಶುಕ್ಲಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಯಾವುದೇ ಅನುಮಾನವು ವ್ಯಕ್ತವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶುಕ್ಲಾ ಅವರ ಮೃತದೇಹವನ್ನು ಮೂವರು ವೈದ್ಯರ ತಂಡದ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಈ ವೇಳೆ ವೈದ್ಯರು ಸಿದ್ದಾರ್ಥ್ ದೇಹದಲ್ಲಿ ಯಾವುದೇ ರೀತಿಯ ಬಾಹ್ಯ ಹಾಗೂ ಆಂತರಿಕ ಗಾಯಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ವಿಸ್ಸೆರಾ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದ್ದು, ಹಿಸ್ಟೊಪೆಥಾಲಜಿ ಮಾಡ ಲಾಗುತ್ತದೆ. ಆ ಬಳಿಕವೇ ಸಾವಿಗೆ ಕಾರಣ ಸ್ಪಷ್ಟ ವಾಗುತ್ತದೆ ಎಂದು ಹೇಳಲಾಗಿದೆ.
ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಇಂದು ನಡೆಯುತ್ತಿದ್ದು, ಜುಹೂನಲ್ಲಿರುವ ಬ್ರಹ್ಮಕುಮಾರಿ ಕಚೇರಿಗೆ ಮೃತದೇಹ ಕೊಂಡೊಯ್ದು, ಅಲ್ಲಿ ಆತ್ಮಶಾಂತಿಗಾಗಿ ಪೂಜೆ ನಡೆಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.