Sunday, 15th December 2024

ಸೆಪ್ಟಂಬರ್​ 15 ಮತ್ತು 16 ರಂದು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ

ದುಬೈ: ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟಂಬರ್​ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ.

ಒಂದೇ ವೇದಿಕೆಯಲ್ಲಿ ನಟ, ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ನೋಡುವ ಸುಂದರ ಗಳಿಗೆ ಯಿದು. ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಸೆಪ್ಟಂಬರ್​ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ.

ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೌತ್ ಸಿನಿಮಾ ಅಂದರೆ ಕನ್ನಡ, ತೆಲುಗು, ತಮಿಳು, ಮಲಯಾ ಳಂ ಚಿತ್ರರಂಗದಲ್ಲಿ ನಿರ್ಮಾಣವಾಗಿರುವ ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಟನೆ, ನಿರ್ದೇಶನ, ನಿರ್ಮಾಣ, ಛಾಯಾಗ್ರಹಣ, ಸಾಹಿತ್ಯ ಹೀಗೆ ಎಲ್ಲಾ ವಿಭಾಗದಲ್ಲೂ ಪ್ರಶಸ್ತಿಯನ್ನು ಕೊಡಲಾಗು ತ್ತದೆ.

ಬಹುಭಾಷಾ ನಟಿ ಶೃತಿ ಹಾಸನ್ ಮಾತನಾಡಿ, “ಬೆಂಗಳೂರಿಗೆ ಮರಳಿ ಬಂದಿರುವುದು ಖುಷಿ ಆಗಿದೆ. ಮೊದಲ ವರ್ಷ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದೆ. ಸೈಮಾ ಮತ್ತಷ್ಟು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಚಿತ್ರರಂಗದ ಮಂದಿಯನ್ನು, ಪ್ರತಿಭಾವಂತರನ್ನು ಗೌರವಿಸುವ ಕೆಲಸ ಮುಂದುವರಿಸಲಿ” ಎಂದು ಹಾರೈಸಿದರು. ನಟ ರಾಕ್ಷಸ ಡಾಲಿ ಧನಂಜಯ್​ ಮಾತನಾಡಿ, ಸೈಮಾ ಅವಾರ್ಡ್ಸ್​ ಜೊತೆಗಿನ ಸುಂದರ ನೆನಪುಗಳನ್ನು ಮೆಲಕು ಹಾಕಿದರು. ನಟಿ ಪ್ರಣಿತಾ ಸುಭಾಷ್​ ಸೈಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, “ಸತತ 11 ನೇ ವರ್ಷದಿಂದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ದಕ್ಷಿಣ ಭಾರತ ದಲ್ಲಿ ಪ್ರಶಸ್ತಿ ನೀಡುವಲ್ಲಿ ಮುಂಚೂಣಿಯಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು. ಈ ಬಾರಿ ಸೈಮಾ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ನಡೆಯಲಿದೆ” ಎಂದು ತಿಳಿಸಿದರು.

ಸೈಮಾ ಅವಾರ್ಡ್ಸ್​ ಕಾರ್ಯಕ್ರಮವನ್ನು ಎರಡು ಭಾಗಗಳಲ್ಲಿ ಆಯೋಜಿಸಲಾಗಿದೆ. ಪ್ರಶಸ್ತಿಗಳ ಮೊದಲ ದಿನದಂದು, ಜನರೇಷನ್ ನೆಕ್ಸ್ಟ್ ಅವಾರ್ಡ್‌ಗಳನ್ನು ದಕ್ಷಿಣ ಭಾರತದ ಭರವಸೆಯ, ಉದಯೋನ್ಮುಖ ನಟರಿಗೆ ನೀಡಲಾಗುತ್ತದೆ. ಎರಡನೇ ದಿನ ಪ್ರಮುಖ ಸೈಮಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.