Sunday, 15th December 2024

ಶ್ರೀಲಂಕಾದ ಶ್ರೀಮಂತ ಉದ್ಯಮಿ ಪುತ್ರಿ ಜತೆ ನಟ ಸಿಲಂಬರಸನ್ ವಿವಾಹ..!

ಚೆನ್ನೈ: ಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಶ್ರೀಲಂಕಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಮದುವೆ ಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.

ಸಿಂಭು ಮದುವೆಯಾಗಲು ಹಲವರು ತುದಿಗಾಲಲ್ಲಿ ನಿಂತಿದ್ದರು. ಅಲ್ಲದೇ, ನಯನತಾರಾ, ತ್ರಿಶಾ ಸೇರಿದಂತೆ ಹಲವು ನಾಯಕಿ ಯರ ಹೆಸರು ಕೂಡ ಸಿಂಭು ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ವಿವಾಹದಿಂದ ದೂರ ಉಳಿಸಿದ್ದರು.

ಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಸಿಂಬು ಮುಂದಾಗಿ ದ್ದಾರೆ ಎನ್ನಲಾಗುತ್ತಿದೆ.

42 ವರ್ಷ ವಯಸ್ಸಿನ ಸಿಂಭು, ತಮಿಳು ಕುಟುಂಬದ ಶ್ರೀಲಂಕಾ ಉದ್ಯಮಿಯ ಮಗಳ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಹೇಳಲಾಗುತ್ತಿದೆ.