ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.
ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದು ಇವರು ಈ ವಾರದ ಮನೆಯ ನಾಯಕ ಕೂಡ ಆದರು. ಹನುಮಂತನ ಆಟ ಕಂಡು ಕಳೆದ ವಾರ ಕಿಚ್ಚ ಸುದೀಪ್ ಈ ಸೀಸನ್ನ ಮೊದಲ ಕಿಚ್ಚನ ಚಪ್ಪಾಳೆ ಹನುಮಂತ ಅವರಿಗೆ ನೀಡಿದರು. ಇಷ್ಟಪಟ್ಟವರಿಗೆ ಕೈಯಲ್ಲಿ ತಟ್ಟೋದು, ಮಿಕ್ಕಿದವರಿಗೆ ಬಾಯಲ್ಲಿ ತಟ್ಟೋದು. ಇದು ನಿಮಗೆ ಕೈಯಲ್ಲಿ ತಟ್ಟಿದ್ದು, ಬೇಷ್ ಅಂದಿದ್ದು ಎಂದು ಹನುಮಂತುಗೆ ಹೇಳಿದ್ದರು.
ಇದೀಗ ಈ ವಾರದ ಕಿಚ್ಚನ ಚಪ್ಪಾಳೆ ಪುನಃ ಹನುಮಂತ ಅವರಿಗೇ ಬರುವ ಸಾಧ್ಯತೆ ಇದೆ. ಈ ವಾರ ಕ್ಯಾಪ್ಟನ್ ಆಗಿ ಇವರು ಅದ್ಭುತವಾಗಿ ನಡೆಸಿಕೊಟ್ಟರು. ಟಾಸ್ಕ್ನ ಉಸ್ತುವಾರಿಯಲ್ಲಿ ಚೂರೂ ರಾಜಿಯಾಗದೆ ತಮ್ಮ ನಿಲುವಿಗೆ ಬದ್ಧವಾಗಿದ್ದರು. ಇದರ ನಡುವೆಯೇ ಮನೆಮಂದಿಯನ್ನು ನಗಿಸಿ, ಹಾಡು ಹಾಡಿ ಮನೋರಂಜನೆ ನೀಡಿದರು. ಇವೆಲ್ಲದಕ್ಕೂ ಮುಗಿಲಾಗಿ ಗೋಲ್ಡ್ ಸುರೇಶ್ ಪರ ಮನಸ್ಪೂರ್ವಕವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದರು.
ಹೌದು, ಕ್ಯಾಪ್ಟನ್ಸಿ ಓಟದಲ್ಲಿ ಭಾಗಿಯಾಗುವ ಅರ್ಹತೆ ಇದ್ದರೂ ಸುರೇಶ್‌ಗೆ ಆಟ ಆಡುವುದಕ್ಕೆ ಸಾಧ್ಯವಾಗಲಿಲ್ಲ. ಇವರ ಕಾಲಿಗೆ ಪೆಟ್ಟಾಗಿರುವುದರಿಂದ ಸದ್ಯ ಅವರು ಜೋರಾಗಿ ಓಡಾಡುವಂತಿಲ್ಲ. ಹಾಗಾಗಿ, ಅವರಿಗೆ ಬಿಗ್ ಬಾಸ್ ಒಂದು ಚಾನ್ಸ್ ನೀಡಿದರು. ನಿಮ್ಮ ಬದಲಿಗೆ ಇನ್ನೊಬ್ಬರನ್ನು ಕ್ಯಾಪ್ಟನ್ಸಿ ಆಟ ಆಡಬಹುದು ಎಂಬ ಆಯ್ಕೆ ನೀಡಿದರು. ಈ ಅವಕಾಶವನ್ನು ಬಳಸಿಕೊಂಡ ಸುರೇಶ್, ನನ್ನ ಪರವಾಗಿ ನೀನು ಆಡುತ್ತೀಯಾ? ಎಂದು ಹನುಮಂತು ಬಳಿ ಕೇಳಿಕೊಂಡಿದ್ದಾರೆ.
ಇದಕ್ಕೆ ಒಪ್ಪಿದ ಹನುಮಂತ ನನ್ನ ಕೈಯಿಂದ ಎಷ್ಟು ಆಗುತ್ತೊ ಅಷ್ಟು ಆಡುತ್ತೇನೆ ಎಂದು ಹೇಳಿ ಟಾಪ್ ಮೂರರಲ್ಲಿ ಬಂದಿದ್ದಾರೆ. ಆದರೆ ಅಂತಿಮ ಟಾಪ್ 2ಕ್ಕೆ ಬರಲು ಸಾಧ್ಯವಾಗಲಿಲ್ಲ. ಏಳು ಮಂದಿಯಲ್ಲಿ ತ್ರಿವಿಕ್ರಮ್, ಭವ್ಯಾ, ಹನುಮಂತು ಬಿಟ್ಟು ಎಲ್ಲರೂ ಔಟ್ ಆಗಿದ್ದರು. ಹನುಮಂತು ಅವರ ಈ ಆಟವನ್ನು ಕಂಡು ಮನೆಮಂದಿ ಕೂಡ ಪ್ರಶಂಶಿಸಿದರು. ಇಡೀ ಆಟದಲ್ಲಿ ರಿಯಲ್ ಗೇಮ್ ಅಂದ್ರೆ, ಅದು ಹನುಮಂತು ಆಡಿದ್ದು ಎಂದು ಚೈತ್ರಾ, ಅನುಷಾ, ತ್ರಿವಿಕ್ರಮ್ ಮುಂತಾದರು ಹೇಳಿದ್ದಾರೆ.
BBK 11: ಮತ್ತೆ ಸೈಲೆಂಟ್ ಆದ ಧರ್ಮಾ ಕೀರ್ತಿರಾಜ್: ಈ ಬಾರಿಯೂ ತಪ್ಪಿದ ಕ್ಯಾಪ್ಟನ್ಸಿ