ಲಂಡನ್: ಬ್ರಿಟಿಷ್-ಐರಿಶ್ ಬ್ಯಾಂಡ್ ‘ದಿ ವಾಂಟೆಡ್’ನ ಸದಸ್ಯನಾಗಿದ್ದ ಗಾಯಕ ಟಾಮ್ ಪಾರ್ಕರ್ (33)ಅವರು ಮಿದುಳು ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ.
ಟಾಮ್ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದರು. ಅವರು ನಿಧನ ಹೊಂದಿರುವ ವಿಚಾರ ವನ್ನು ‘ದಿ ವಾಂಟೆಡ್’ ಬ್ಯಾಂಡ್ ಘೋಷಣೆ ಮಾಡಿದ್ದು, ಸಾಕಷ್ಟು ದುಃಖ ವ್ಯಕ್ತಪಡಿಸಿದೆ. ಟಾಮ್ ಪಾರ್ಕರ್ ನಿಧನಕ್ಕೆ ವಿಶ್ವದ ನಾನಾ ಕಡೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರ ಕೂಡ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಟಾಮ್ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರ ವನ್ನು ಅವರು ಸೋಶಿಯಲ್ ಮೀಡಿಯಾ ದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು.
ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕೆಮೋಥೆರಪಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್ನ ಗುಣಮಾಡಲು ಸಾಧ್ಯವಾಗಲೇ ಇಲ್ಲ. ಕೆಲ್ಸಿ ಹಾಗೂ ಟಾಮ್ 2018ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು.
2009ರಲ್ಲಿ ‘ದಿ ವಾಂಟೆಡ್’ ಬ್ಯಾಂಡ್ ಆರಂಭಗೊಂಡಿತು. ಟಾಮ್ ಪಾರ್ಜರ್ ಸೇರಿ ಐದು ಮಂದಿ ಇದನ್ನು ಆರಂಭಿಸಿದರು.