ತಿರುಮಲ ತಿರುಪತಿಯಲ್ಲಿ ಭಾರಿ ಮಳೆಯ ಕಾರಣದಿಂದ ಎರಡು ದಿನ ಭಕ್ತರಿಗೆ ದೇವರ ದರ್ಶನವನ್ನು ಬಂದ್ ಮಾಡಲಾಗಿದೆ. ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿ ಗೊಳಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಭಾರೀ ಮಳೆಗೆ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಅಲ್ಲದೇ ಸುಮಾರು 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಎನ್ಡಿಆರ್ಎಫ್ ತಂಡ ತನ್ನ ಕಾರ್ಯನಿರ್ವಹಿಸುತ್ತಿದೆ. ಈಗ ಸೋನು ಸೂದ್ ಅವರು ಮಳೆಯಲ್ಲಿ ಸಿಲುಕಿದವರ ಸಹಾಯಕ್ಕೆ ಬಂದಿದ್ದಾರೆ. ಕೇವಲ ಕೊವಿಡ್ ಮಾತ್ರವಲ್ಲದೆ, ಉಳಿದ ಸಮಸ್ಯೆ ಎದುರಿಸುತ್ತಿರುವ ಜನರಿಗೂ ಸೋನು ಸಹಾಯ ಮಾಡುತ್ತಿದ್ದಾರೆ. ಆಂಧ್ರದ ಮಳೆಯಲ್ಲಿ ಸಿಲುಕಿದವರಿಗೆ ಅವರು ಸಹಾಯಕ್ಕೆ ಮುಂದಾಗಿದ್ದಾರೆ.
ಸೋನು ಅವರೇ ನೆಲ್ಲೂರು ಮತ್ತು ತಿರುಪತಿಯು ಅತಿವೃಷ್ಟಿಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಮಳೆಯ ನೀರು ಅನೇಕ ಮನೆಗಳಿಗೆ ನುಗ್ಗಿದೆ ಮತ್ತು ಸಾಕಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ತಿನ್ನೋಕೆ ಆಹಾರ ಇಲ್ಲ. ದಯವಿಟ್ಟು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಿ’ ಎಂದು ಕೋರಲಾಗಿತ್ತು.
ಇದಕ್ಕೆ ಉತ್ತರಿಸಿರುವ ಸೋನು ಸೂದ್, ‘ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’ ಎಂದಿದ್ದಾರೆ. ಈ ಮೂಲಕ ಸಹಾಯ ಮಾಡುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ.