Saturday, 14th December 2024

ಬಿಎಂಸಿ ನೋಟಿಸು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ನಟ ಸೋನು ಸೂದ್

ಮುಂಬೈ:  ಪೂರ್ವಾನುಮತಿ ಪಡೆಯದೆ ಜುಹು ಪ್ರದೇಶದಲ್ಲಿ ವಸತಿ ಕಟ್ಟಡವನ್ನು ಹೋಟೆಲ್‌ ಆಗಿ ಪರಿವರ್ತಿಸಿದ ಆರೋಪ ದಡಿ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೀಡಿದ್ದ ನೋಟಿಸ್‌ ಅನ್ನು ಪ್ರಶ್ನಿಸಿ ಬಾಲಿವುಡ್‌ ನಟ ಸೋನು ಸೂದ್‌ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕಳೆದ ವಾರ ವಕೀಲ ಡಿ.ಪಿ ಸಿಂಗ್‌ ಅವರ ಮೂಲಕ ಸೋನು ಸೂದ್‌ ಅರ್ಜಿ ಸಲ್ಲಿಸಿದ್ದರು. ಕಟ್ಟಡದಲ್ಲಿ ತಾವು ಯಾವುದೇ ‘ಅಕ್ರಮ ಅಥವಾ ಅನಧಿಕೃತ’ ನಿರ್ಮಾಣವನ್ನು ನಡೆಸಿಲ್ಲ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಪೃಥ್ವಿರಾಜ್‌ ಚವಾಣ್ ಅವರು ಸೋಮವಾರ ಅರ್ಜಿ ವಿಚಾರಣೆ ನಡೆಸಲಿದ್ದಾರೆ.

ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ (ಎಂಆರ್‌ಟಿಪಿ)ಕಾಯ್ದೆಯಡಿ ಅವಕಾಶವಿರುವ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ’ ಎಂದು ಡಿ.ಪಿ ಸಿಂಗ್‌ ತಿಳಿಸಿದರು.