Saturday, 12th October 2024

ಸುಶಾಂತ್ ಸಿಂಗ್ ರಜಪೂತ್ ಕೊಲೆಯಲ್ಲ, ಆತ್ಮಹತ್ಯೆಯಂತೆ: ಏಮ್ಸ್

ನವದೆಹಲಿ : ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಗಳ ಮರು ಮೌಲ್ಯಮಾಪನ ಮಾಡುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಮಿತಿಯ ನೇತೃತ್ವ ವಹಿಸಿದ್ದ ಡಾ.ಸುಧೀರ್ ಗುಪ್ತಾ, ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು, ಕೊಲೆ ಯತ್ನವನ್ನು ತಳ್ಳಿಹಾಕಲಾಗಿದೆ ಎಂದು ಹೇಳಿದ್ದಾರೆ.

‘ಸುಶಾಂತ್ ಸಾವು ಆತ್ಮಹತ್ಯೆ ಪ್ರಕರಣ. ಕೊಲೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ’ ಎಂದು ಗುಪ್ತಾ ಹೇಳಿದ್ದಾರೆ. ಏಮ್ಸ್ ವೈದ್ಯರ ತಂಡ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ಮತ್ತು ವಿಸೆರಾ ವರದಿಗಳನ್ನು ಆಧರಿಸಿ, ಅವರ ಬಳಿ ಲಭ್ಯ ವಿರುವ ಶೇ.20ರಷ್ಟು ವಿಸೆರಾ ಮಾದರಿಯನ್ನು ಆಧರಿಸಿ ಸುಶಾಂತ್‌ ಸಿಂಗ್‌ ಮರಣದ ಬಗ್ಗೆ ಮರು ಮೌಲ್ಯಮಾಪನ ಮಾಡಿತ್ತು.

ವಿಧಿವಿಜ್ಞಾನ ಸಂಸ್ಥೆಗಳು ಒಂದು ಲ್ಯಾಪ್ ಟಾಪ್, ಎರಡು ಹಾರ್ಡ್ ಡಿಸ್ಕ್ ಗಳು, ಒಂದು ಕ್ಯಾನನ್ ಕ್ಯಾಮೆರಾ ಮತ್ತು ಎರಡು ಮೊಬೈಲ್ ಫೋನ್ ಗಳನ್ನು ಪರೀಕ್ಷಿಸಿವೆ ಎನ್ನಲಾಗಿದೆ.