ಮುಂಬೈ: ಶಾರುಖ್ ಖಾನ್-ನಯನತಾರಾ ಅಭಿನಯದ ‘ಜವಾನ್;, ಶಾರುಖ್ ಖಾನ್-ದೀಪಿಕಾ ಪಡುಕೋಣೆ ಕಾಂಬಿನೇಷನ್ನ ‘ಪಠಾಣ್’, ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಜೋಡಿಯ ‘ಅನಿಮಲ್’ ಕಳೆದ ವರ್ಷ ಬಾಲಿವುಡ್ನಲ್ಲಿ ದಾಖಲೆಯ ಗಳಿಕೆ ಕಂಡಿದ್ದವು. ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದ್ದವು. ಇದೀಗ ಈ ಚಿತ್ರಗಳ ದಾಖಲೆಯನ್ನು ʼಸ್ತ್ರೀ 2ʼ (Stree 2) ಮುರಿದಿದೆ. ರಾಜ್ಕುಮಾರ್ ರಾವ್-ಶ್ರದ್ಧಾ ಕಪೂರ್ ಅಭಿನಯದ ಈ ಬಾಲಿವುಡ್ ಚಿತ್ರ 600 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಸ್ಟಾರ್ಗಳನ್ನೇ ದಂಗು ಬಡಿಸಿದೆ. ಈಗಲೂ ಥಿಯೇಟರ್ಗಳಲ್ಲಿ ಪ್ರದರ್ಶನವಾಗುತ್ತಿರುವ ಈ ಹಾರರ್ ಕಾಮಿಡಿ ಚಿತ್ರ ಇದೀಗ ಒಟ್ಟಿಗೂ ಲಗ್ಗೆ ಇಟ್ಟಿದೆ (Stree 2 On OTT).
#Stree2
— Filmy Interpretation (@FilmyInterpret) September 26, 2024
⭐️ Available on Rent
Ott – @PrimeVideoIN
Price – 349Rs
Production house: #MaddockFilms #JioStudios
Producer(s):#DineshVijan
Director:#AmarKaushik
Cast:#ShraddhaKapoor,#RajkumarRao,#PankajTripathi, #AbhishekBanerjee& #AparshaktiKhuranna#Stree2onPrime pic.twitter.com/7aiga7dnuh
ಎಲ್ಲಿ ಪ್ರಸಾರ?
ʼಸ್ತ್ರೀ 2ʼ ಚಿತ್ರವನ್ನು ನೀವು ಅಮೇಜಾನ್ ಪ್ರೈಮ್ ವಿಡಿಯೊ (Amazon Prime Video)ದಲ್ಲಿ ವೀಕ್ಷಿಸಬಹುದು. ಆದರೆ ಇದರಲ್ಲೊಂದು ಟ್ವಿಸ್ಟ್ ಇದೆ. ಇದನ್ನು ನೀವು ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ನೀವು ಬಾಡಿಗೆ ಪಾವತಿಸಿ ನೋಡಬೇಕಾಗುತ್ತದೆ.
ಅಮೇಜಾನ್ ಪ್ರೈಮ್ ವಿಡಿಯೊ ಬೇಡಿಕೆ ಇರುವ ಸಿನಿಮಾಗಳನ್ನು ರೆಂಟ್ ಕ್ಯಾಟಗರಿಗೆ ಸೇರಿಸುತ್ತದೆ. ಇಂತಹ ಸಿನಿಮಾಗಳನ್ನು ವೀಕ್ಷಿಸಬೇಕಾದರೆ ನಿಗದಿಪಡಿಸಿದ ಹಣ ಪಾವತಿಸಬೇಕಾಗುತ್ತದೆ. ‘ಸ್ತ್ರೀ 2’ ಚಿತ್ರವನ್ನೂ ಇದೇ ವಿಭಾಗದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಸೂಪರ್ ಹಿಟ್ ಚಿತ್ರವನ್ನು ವೀಕ್ಷಿಸಬೇಕಾದರೆ ನೀವು 349 ರೂ. ಪಾವತಿಸಬೇಕಾಗುತ್ತದೆ. ಸದ್ಯ ಹಿಂದಿಯಲ್ಲಿ ಮಾತ್ರ ಲಭ್ಯವಿರುವ ಈ ಚಿತ್ರದ ಉಚಿತ ವೀಕ್ಷಣೆಗೆ ಇನ್ನೂ ಕೆಲವು ದಿನಗಳವರೆಗೆ ಕಾಯುವುದು ಅನಿವಾರ್ಯ.
600 ಕೋಟಿ ರೂ. ಕ್ಲಬ್ಗೆ ಸೇರಿದ ಮೊದಲ ಹಿಂದಿ ಚಿತ್ರ
ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ 40 ದಿನಗಳಲ್ಲೇ ಬರೋಬ್ಬರಿ 600 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಆ ಮೂಲಕ 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ ಎನಿಸಿಕೊಂಡಿದೆ. ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಕಾಮಿಡಿ, ಹಾರರ್ ಹದವಾಗಿ ಬೆರೆತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಕಳೆದ ವರ್ಷ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಪಠಾಣ್’, ʼಜವಾನ್ʼ, ಸನ್ನಿ ಡಿಯೋಲ್ ನಟನೆಯ ‘ಗಧರ್ 2’, ರಣಬೀರ್ ಕಪೂರ್ ಅಭಿನಯದ ʼಅನಿಮಲ್ʼ ಮೊದಲಾದ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿದ್ದವು. ಆದರೆ 600 ಕೋಟಿ ರೂ. ಗಡಿ ದಾಟಲು ವಿಫಲವಾಗಿದ್ದವು. ಇದೀಗ ʼಸ್ತ್ರೀ 2ʼ ಆ ಮೈಲಿಗಲ್ಲನ್ನೂ ದಾಟಿ ಅಂದಾಜು 605.72 ಕೋಟಿ ರೂ. ಬಾಚಿಕೊಂಡಿದೆ.
ಇಷ್ಟಕ್ಕೆ ಇದರ ಹೆಗ್ಗಳಿಕೆ ಮುಗಿದಿಲ್ಲ. ಸುಮಾರು 60 ಕೋಟಿ ರೂ. ಬಜೆಟ್ನಲ್ಲಿ ತಯಾರಾದ ಇದು ಸುಮಾರು 10 ಪಟ್ಟು ಅಧಿಕ ಕಲೆಕ್ಷನ್ ಮಾಡುವ ಮೂಲಕ ಅತೀ ಹೆಚ್ಚು ಲಾಭ ಗಳಿಸಿದ ಚಿತ್ರಗಳ ಸಾಲಿನಲ್ಲಿಯೂ ಗುರುತಿಸಿಕೊಂಡಿದೆ. ಅಲ್ಲದೆ ಇದು 2024ರ ಅತ್ಯಂತ ಲಾಭದಾಯಕ ಚಿತ್ರ ಮತ್ತು 500 ಕೋಟಿ ರೂ. ಗಿಂತ ಹೆಚ್ಚು ಆದಾಯ ಪಡೆದ ಏಕೈಕ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ, ಸುನೀತಾ ರಾಜ್ವಾರ್ ಮತ್ತಿತರರು ಇದರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Stree 2 Box Office Collection: ಬಾಲಿವುಡ್ನಲ್ಲಿ ದಾಖಲೆ ಬರೆದ ʼಸ್ತ್ರೀ 2ʼ; 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ